ರಾಜಧಾನಿ ಪೊಲೀಸರು, ನಾಗರಿಕರಿಗೆ ಕಳವು ವಸ್ತುಗಳನ್ನು ಭಾನುವಾರ ರಾತ್ರಿ ಮರಳಿಸುವ ಮೂಲಕ ನೂತನ ವರ್ಷದ ಶುಭ ಕೋರಿದ್ದಾರೆ. ಪೊಲೀಸ್ ಆಯುಕ್ತರ ಸೂಚನೆ ಮೇರೆಗೆ ಕಳವು ಪ್ರಕರಣಗಳಲ್ಲಿ ಪತ್ತೆಯಾಗಿದ್ದ ವಸ್ತುಗಳನ್ನು ಪೊಲೀಸರು, ರಾತ್ರಿ ವಾರಸುದಾರರಿಗೆ ಹಸ್ತಾಂತರಿಸಿ ಹೊಸ ವರ್ಷದ ಶುಭಾಶಯ ಹೇಳಿದ್ದಾರೆ.

ಬೆಂಗಳೂರು (ಜ.2): ಗ್ರಿಟಿಂಗ್ಸ್, ಸಿಹಿ, ಹೂ ಗುಚ್ಛ ಹಾಗೂ ಕೇಕ್ ಹೀಗೆ ತರಹೇವಾರಿ ಊಡುಗೊರೆ ನೀಡಿ ಹೊಸ ವರ್ಷದ ಶುಭ ಕೋರೋದು ಸಾಮಾನ್ಯ ಸಂಗತಿ. ಆದರೆ ಯಾವತ್ತೋ ಕಳದುಕೊಂಡಿದ್ದ ವಸ್ತುಗಳನ್ನು ಪೊಲೀಸರು, ನಡುರಾತ್ರಿ ಮನೆ ಬಾಗಿಲಿಗೆ ತಂದು ಹೊಸ ವರ್ಷದ ಊಡುಗೊರೆಯಾಗಿ ಮರಳಿಸಿದರೆ...!

ಅಚ್ಚರಿ ಎನ್ನಿಸಿದರೂ ಸತ್ಯ. ರಾಜಧಾನಿ ಪೊಲೀಸರು, ನಾಗರಿಕರಿಗೆ ಕಳವು ವಸ್ತುಗಳನ್ನು ಭಾನುವಾರ ರಾತ್ರಿ ಮರಳಿಸುವ ಮೂಲಕ ನೂತನ ವರ್ಷದ ಶುಭ ಕೋರಿದ್ದಾರೆ. ಪೊಲೀಸ್ ಆಯುಕ್ತರ ಸೂಚನೆ ಮೇರೆಗೆ ಕಳವು ಪ್ರಕರಣಗಳಲ್ಲಿ ಪತ್ತೆಯಾಗಿದ್ದ ವಸ್ತುಗಳನ್ನು ಪೊಲೀಸರು, ರಾತ್ರಿ ವಾರಸುದಾರರಿಗೆ ಹಸ್ತಾಂತರಿಸಿ ಹೊಸ ವರ್ಷದ ಶುಭಾಶಯ ಹೇಳಿದ್ದಾರೆ.

ಇನ್ನೂ ರಾತ್ರಿ ಮನೆಗೆ ಬಂದ ಪೊಲೀಸರು ಗಿಫ್ಟ್ ನೀಡಿದ್ದು ಜನರ ಮೊಗದಲ್ಲಿ ಅನಿರೀಕ್ಷಿತವಾಗಿ ಗತಿಸಿದ ಸಂತಸ ಗಳಿಗೆಯಾಗಿದೆ. ಮೈಕೋ ಲೇಔಟ್, ಯಲಹಂಕ ಹಾಗೂ ಬೊಮ್ಮನಹಳ್ಳಿ ಸೇರಿದಂತೆ ಕೆಲವು ಠಾಣೆಗಳ ಪೊಲೀಸರು, ಮಧ್ಯರಾತ್ರಿಯಲ್ಲಿ ಜನರಿಗೆ ಅಚ್ಚರಿ ಗಿಫ್ಟ್ ನೀಡಿದ್ದಾರೆ.

ಮೈಕೋ ಲೇಔಟ್ ಉಪ ವಿಭಾಗ ಎಸಿಪಿ ಕರಿಬಸವನಗೌಡ ಮತ್ತು ಬೊಮ್ಮನಹಳ್ಳಿ ಠಾಣೆ ಇನ್‌ಸ್ಪೆಕ್ಟರ್ ರಾಜೇಶ್ ಅವರು, ಬೊಮ್ಮನಹಳ್ಳಿಯ ನಂದಕಿಶೋರ್ ಮನೆಗೆ ತೆರಳಿ 3 ಲಕ್ಷ ಮೌಲ್ಯದ 50 ಗ್ರಾಂ ಚಿನ್ನದ ಸರ ಮರಳಿಸಿದರು. ನಂದಕಿಶೋರ್ ಅವರ ಪತ್ನಿ ಗಾರ್ಮೆಂಟ್ಸ್ ಉದ್ಯೋಗಿಯಾಗಿದ್ದು, ಕೆಲ ತಿಂಗಳ ಹಿಂದೆ ಅವರ ಮನೆಯಲ್ಲಿ ಪರಿಚಯಸ್ಥ ಯುವಕ ಚಿನ್ನಾಭರಣ ಕಳವು ಮಾಡಿದ್ದ. ಈ ಪ್ರಕರಣವನ್ನು ಪತ್ತೆ ಹಚ್ಚಿದ ಪೊಲೀಸರು, ಆರೋಪಿಯಿಂದ ಚಿನ್ನದ ಸರ ವಶಪಡಿಸಿಕೊಂಡಿದ್ದರು.

ಬಳಿಕ ಆಗ್ನೇಯ ವಿಭಾಗ ಡಿಸಿಪಿ ಡಾ.ಎಂ.ಬಿ. ಬೋರಲಿಂಗಯ್ಯ ಸಲಹೆ ಮೇರೆಗೆ ಎಸಿಪಿ, ನಂದಕಿಶೋರ್‌ಗೆ ಭಾನುವಾರ ರಾತ್ರಿ ಕರೆ ಮಾಡಿದಾಗ ‘ನಡುರಾತ್ರಿ ಯಾಕ್ ಕರೆ ಮಾಡುತ್ತೀರಾ’ ಎಂದು ಕರೆ ಕಟ್ ಮಾಡಿದ್ದರು. ಮತ್ತೆ ಕರೆ ಮಾಡಿದಾಗ ರಾಗ್ ನಂಬರ್ ಎಂದರು. ಕೊನೆಗೆ ಮನೆಗೆ ತೆರಳಿ ಚಿನ್ನದ ಸರ ಕೊಟ್ಟಾಗ ಅವರ ಮಹಿಳೆಯೊಬ್ಬರಿಗೆ ಚಿನ್ನದ ಸರ ಹಸ್ತಾಂತರಿಸಿದ ಪೊಲೀಸರು. ಆನಂದದ ಹೇಳತೀರದಾಗಿತ್ತು ಎನ್ನುತ್ತಾರೆ ಪೊಲೀಸರು.