ಇವರು ಕಳೆದ ಒಂದು ವಾರದಿಂದ ಐಜಿಪಿ ವಿಫುಲ್ ಕುಮಾರ್ ಅವರ ಮನೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು.

ಮೈಸೂರು(ಮಾ.02): ಪೇದೆಯೊಬ್ಬರು ಐಜಿ ನಿವಾಸದಲ್ಲೇ ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರಿನ ನಜರ್ಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಶೇಷಪ್ಪ(41) ಮೃತ ಪೇದೆ.
ಇವರು ಕಳೆದ ಒಂದು ವಾರದಿಂದ ಐಜಿಪಿ ವಿಫುಲ್ ಕುಮಾರ್ ಅವರ ಮನೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಇಂದು ಕೆಲಸಕ್ಕೆ ತೆರಳಿದ್ದ ಹಾಜರಾಗಿದ್ದ ಇವರು ಮನೆಗೆ ತೆರೆಳುವ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಮೂಲತಃ ಡಿಆರ್ ಪೇದೆಯಾಗಿದ್ದರು. ಆತ್ಮಹತ್ಯೆಗೆ ಕೌಟಿಂಬಿಕ ಕಾರಣ ಎನ್ನಲಾಗಿದೆ. ಮೃತದೇಹವನ್ನು ಕೆಆರ್ ಆಸ್ಪತ್ರೆಗೆ ರವಾನಿಸಲಾಗಿದೆ.