ಹೈದರಾಬಾದ್[ಆ.13]: ಒಂದು ಆಟೋದಲ್ಲಿ ಹೆಚ್ಚೆಂದರೂ ಎಷ್ಟುಮಂದಿಯನ್ನು ಸಾಗಿಸಲು ಸಾಧ್ಯ? ತೆಲಂಗಾಣದ ಆಟೋ ಚಾಲಕನೊಬ್ಬ ಬರೋಬ್ಬರಿ 24 ಜನರನ್ನು ಆಟೋದಲ್ಲಿ ಸಾಗಿಸುತ್ತಿದ್ದ ವೇಳೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

ವರುಣನ ಅಬ್ಬರಕ್ಕೆ ಕರುನಾಡು ತತ್ತರ: ಮಳೆಗೆ ಸಂಬಂಧಿಸಿದ ಎಲ್ಲಾ ಸುದ್ದಿಗಳಿಗಾಗಿ ಕ್ಲಿಕ್ಕಿಸಿ

ಹೈದರಾಬಾದ್‌ನ ತಿಮ್ಮಲಾಪುರದಿಂದ ಬರುತ್ತಿದ್ದ ಆಟೋ ಚಾಲಕನನ್ನು ತಡೆದ ಪೊಲೀಸರು ಅದರಲ್ಲಿ ಇದ್ದವರನ್ನು ಒಬ್ಬೊಬ್ಬರಾಗಿ ಕೆಳಗೆ ಇಳಿಸಿದಾಗ ಅಚ್ಚರಿ ಕಾದಿತ್ತು. ಆಟೋದಿಂದ ಮಕ್ಕಳು ಮಹಿಳೆಯರು ಸೇರಿ 24 ಮಂದಿ ಕೆಳಗೆ ಇಳಿದಿದ್ದಾರೆ.