ಕೊಮ್ಮಘಟ್ಟ ಮಂಜ, ಕುಖ್ಯಾತ ಸರಗಳ್ಳ ದರೋಡೆಕೊರನಾಗಿದ್ದು, 5 ತಿಂಗಳಿಂದ ಜೈಲುಪಾಲಾಗಿದ್ದ.
ಬೆಂಗಳೂರು(ಫೆ.28): ಸಿಲಿಕಾನ್ ಸಿಟಿಯಲ್ಲಿ ಮತ್ತೊಮ್ಮೆ ಫೈರಿಂಗ್ ನಡೆದಿದೆ. ಕೆಲವು ದಿನಗಳ ಹಿಂದೆ ದುಷ್ಕರ್ಮಿಗಳು ರೌಡಿ ಶೀಟರ್ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಆದರೆ ಈಗ ಪೊಲೀಸರು ಕಳ್ಳನ ಮೇಲೆ ಫೈರಿಂಗ್ ನಡೆಸಿದ್ದಾರೆ.
ಸರಗಳ್ಳತನ ಮಾಡಿ ತಪ್ಪಿಸಿಕೊಳ್ಳುತ್ತಿದ್ದ ಕಳ್ಳನ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ. ಹೆಸರುಘಟ್ಟದ ಆಚಾರ್ಯ ಕಾಲೇಜು ಬಳಿ ಸರಗಳ್ಳತನ ಮಾಡಿ ತಪ್ಪಿಸಿಕೊಳ್ಳುತ್ತಿದ್ದ ಕೊಮ್ಮಘಟ್ಟ ಮಂಜ ಎಂಬಾತನ ಮೇಲೆ ವಿದ್ಯಾರಣ್ಯಪುರ ಇನ್ಸ್ಪೆಕ್ಟರ್ ಪುನೀತ್ ಫೈರ್ ಮಾಡಿದ್ದಾರೆ.
ಗಾಯಗೊಂಡ ಈತನನ್ನು ಸಪ್ತಗಿರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೊಮ್ಮಘಟ್ಟ ಮಂಜ, ಕುಖ್ಯಾತ ಸರಗಳ್ಳ ದರೋಡೆಕೊರನಾಗಿದ್ದು, 5 ತಿಂಗಳಿಂದ ಜೈಲುಪಾಲಾಗಿದ್ದ. ಇಂದು ಜಾಮೀನಿನ ಮೇಲೆ ಹೊರ ಬಂದಿದ್ದ ಈತ ಸರಗಳ್ಳತನಕ್ಕೆ ಇಳಿದಿದ್ದ ಈತನ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ.
