ಮೇ 11 ರಂದು ಮಹಾಲಕ್ಷ್ಮಿ ಲೇಔಟ್ ಬಳಿ ಈಶ್ವರಪ್ಪ ಪಿಎ ವಿನಯ್ ಕಾರನ್ನು ಫಾಲೋ ಮಾಡಿ ಕಿಡ್ನಾಪ್ ಮಾಡಲು ಯತ್ನಿಸಿದ್ದರು. ಈ ಕುರಿತು ಮಹಾಲಕ್ಷ್ಮಿ ಲೇಔಟ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರಕರಣ ಸಂಬಂಧ ಪೊಲೀಸರು ಹಲವರನ್ನು ಈಗಾಗಲೇ ಬಂಧಿಸಿದ್ದಾರೆ. ಜುಲೈ 10 ರಂದು ರಾಜೇಂದ್ರ ಅರಸ್ ವಿಚಾರಣೆ ನಡೆದಾಗ ಬಿಎಸ್'ವೈ ಪಿಎ ಸಂತೋಷ್ ಪಾತ್ರವಿದೆ ಎಂದಿದ್ದರು. ನಂತರ ಸಂತೋಷ್'ಗೆ ಆಗಸ್ಟ್ 5 ರಂದು ನಿರೀಕ್ಷಣಾ ಜಾಮೀನು ಮಂಜೂರಾಗಿತ್ತು.
ಬೆಂಗಳೂರು(ಆ. 09): ಈಶ್ವರಪ್ಪ ಪಿಎ ಕಿಡ್ನಾಪ್ ಯತ್ನ ಪ್ರಕರಣದ ವಿಚಾರಣೆಗೆ ಹಾಜರಾಗುವಂತೆ ಬಿಎಸ್'ವೈ ಪಿಎ ಸಂತೋಷ್'ಗೆ ತನಿಖಾಧಿಕಾರಿಗಳು ನೋಟಿಸ್ ನೀಡಿದ್ದಾರೆ. ನಿನ್ನೆ ಸಂತೋಷ್'ಗೆ ನೋಟಿಸ್ ತಲುಪಿಸಿರುವ ಪೊಲೀಸರು ನಾಳೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.
ಮೇ 11 ರಂದು ಮಹಾಲಕ್ಷ್ಮಿ ಲೇಔಟ್ ಬಳಿ ಈಶ್ವರಪ್ಪ ಪಿಎ ವಿನಯ್ ಕಾರನ್ನು ಫಾಲೋ ಮಾಡಿ ಕಿಡ್ನಾಪ್ ಮಾಡಲು ಯತ್ನಿಸಿದ್ದರು. ಈ ಕುರಿತು ಮಹಾಲಕ್ಷ್ಮಿ ಲೇಔಟ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರಕರಣ ಸಂಬಂಧ ಪೊಲೀಸರು ಹಲವರನ್ನು ಈಗಾಗಲೇ ಬಂಧಿಸಿದ್ದಾರೆ. ಜುಲೈ 10 ರಂದು ರಾಜೇಂದ್ರ ಅರಸ್ ವಿಚಾರಣೆ ನಡೆದಾಗ ಬಿಎಸ್'ವೈ ಪಿಎ ಸಂತೋಷ್ ಪಾತ್ರವಿದೆ ಎಂದಿದ್ದರು. ನಂತರ ಸಂತೋಷ್'ಗೆ ಆಗಸ್ಟ್ 5 ರಂದು ನಿರೀಕ್ಷಣಾ ಜಾಮೀನು ಮಂಜೂರಾಗಿತ್ತು.
ಇದೇ ವೇಳೆ, ಸಂತೋಷ್ ಮತ್ತು ವಿನಯ್ ಇಬ್ಬರೂ ಕೂಡ ತಮ್ಮ ಅಧಿಕೃತ ಪಿಎಗಳಲ್ಲ ಎಂದು ಬಿಎಸ್ ಯಡಿಯೂರಪ್ಪ ಮತ್ತು ಕೆಎಸ್ ಈಶ್ವರಪ್ಪ ಸ್ಪಷ್ಟಪಡಿಸಿದ್ದಾರೆ.