ಹೋರಾಟದ ಫಲವಾಗಿ ಸರ್ಕಾರದಿಂದ ಸಿಕ್ಕಿರುವ ಸವಲತ್ತೂ ಸಿಕ್ಕಿತ್ತು. ಇನ್ನು ಸರ್ಕಾರದಿಂದ ನೀಡಿರುವ ಸೌಲಭ್ಯ ವೀಕ್ಷಣೆಗೆ ಮುಂದಾದ ವೇಳೆ ಪೊಲೀಸರು ಅವರಿಗೆ ಅನುಮತಿ ನೀಡಿಲ್ಲ.
ಮಡಿಕೇರಿ (ಡಿ.29): ಮಡಿಕೇರಿ ದಿಡ್ಡಳ್ಳಿ ಗಿರಿಜನರ ಹೋರಾಟಕ್ಕೆ ಬೆನ್ನೆಲುಬಾಗಿ ನಿಂತಿದ್ದ ನಟ ಚೇತನ್'ರನ್ನು ಪೋಲಿಸರು ಹಾಡಿಯಿಂದ ಹೊರಕ್ಕೆ ಕಳುಹಿಸಿದ್ದಾರೆ.
ಗಿರಿಜನರ ಪ್ರತಿಭಟನೆ ವೇಳೆ ಸ್ಥಳದಲ್ಲೇ ವಾಸ್ತವ್ಯ ಹೂಡಿದ್ದ ಚೇತನ್, ಡಿಸೆಂಬರ್ 23ರಂದು ಮಡಿಕೇರಿ ಚಲೋ ಸೇರಿದಂತೆ 16 ದಿನದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.
ಹೋರಾಟದ ಫಲವಾಗಿ ಸರ್ಕಾರದಿಂದ ಸಿಕ್ಕಿರುವ ಸವಲತ್ತೂ ಸಿಕ್ಕಿತ್ತು. ಇನ್ನು ಸರ್ಕಾರದಿಂದ ನೀಡಿರುವ ಸೌಲಭ್ಯ ವೀಕ್ಷಣೆಗೆ ಮುಂದಾದ ವೇಳೆ ಪೊಲೀಸರು ಅವರಿಗೆ ಅನುಮತಿ ನೀಡಿಲ್ಲ.
ಸ್ಥಳದಲ್ಲಿ 144 ಸೆಕ್ಷನ್ ಜಾರಿಯಾಗಿದ್ದು ಕಾನೂನು ಉಲ್ಲಂಘಿಸದಂತೆ ತಾಕೀತು ಮಾಡಿದ್ದಾರೆ. ಈ ವೇಳೆ ಗಿರಿಜನ ವಾಸಿಗಳು ಪೊಲೀಸರ ಜೊತೆ ಮಾತಿನ ಚಕಾಮಕಿ ನಡೆಸಿದರು.