ದಾಖಲೆಯಿಲ್ಲದ 2000 ಸಾವಿರ ರೂ.ಗಳ ಹೊಸ ನೋಟುಗಳ 12.10 ಲಕ್ಷ ರೂ.ಗಳನ್ನು ಬೆಂಗಳೂರಿನ ಮಹದೇವಪುರ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬೆಂಗಳೂರು(ಡಿ.3): ಎಲ್ಲೆಲ್ಲೂ ಹೊಸ ನೋಟುಗಳದ್ದೇ ಆರ್ಭಟ. ಈಗ ಪತ್ತೆಯಾಗಿರುವುದು ಬೆಂಗಳೂರಿನ ಮಹದೇವಪುರದಲ್ಲಿ. ವ್ಯಕ್ತಿಯೊಬ್ಬನಿಂದ ದಾಖಲೆಯಿಲ್ಲದ 2000 ಸಾವಿರ ರೂ.ಗಳ ಹೊಸ ನೋಟುಗಳ 12.10 ಲಕ್ಷ ರೂ.ಗಳನ್ನು ಬೆಂಗಳೂರಿನ ಮಹದೇವಪುರ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆಂಧ್ರಪ್ರದೇಶದ ಮೂಲದ ಮುನೆಶ್ವರಪ್ಪ (66) ಬಂಧಿತ ಆರೋಪಿ. ನಿನ್ನೆ ರಾತ್ರಿ ಐಟಿಪಿಎಲ್ ರಸ್ತೆ ಶೆಲ್ ಪೆಟ್ರೋಲ್ ಬಂಕ್ ಬಳಿ ಆಲ್ಟೋ ಕಾರನ್ನು ತಪಾಸಣೆ ನಡೆಸಿದಾಗ ಹಣ ಪತ್ತೆಯಾಗಿದೆ.
