ನನಗೆ  ಭದ್ರತೆ ಬೇಕು. ಈಗಾಗಲೆ ಸಿಎಂ, ಹೋಮ್ ಮಿನಿಸ್ಟರ್'ರನ್ನು ಭೇಟಿ ಮಾಡಿದ್ದೇವೆ. ಹೀಗಾಗಿ ಯಾಕೆ ಭದ್ರತೆ ಬೇಕು ಅಂತ ಇಂಟಲಿಜೆನ್ಸ್'ನವರು  ಕರೆ ಮಾಡಿದ್ದರು.  ಹೀಗಾಗಿ ಬಂದು ಮಾಹಿತಿ ನೀಡಿದ್ದೇನೆ ಎಂದು ಸುನೀಲ್ ಹೆಗ್ಗರವಳ್ಳಿ ಸುವರ್ಣ ನ್ಯೂಸ್'ಗೆ ಹೇಳಿದ್ದಾರೆ.  

ಬೆಂಗಳೂರು (ಡಿ.13): ನನಗೆ ಭದ್ರತೆ ಬೇಕು. ಈಗಾಗಲೆ ಸಿಎಂ, ಹೋಮ್ ಮಿನಿಸ್ಟರ್'ರನ್ನು ಭೇಟಿ ಮಾಡಿದ್ದೇವೆ. ಹೀಗಾಗಿ ಯಾಕೆ ಭದ್ರತೆ ಬೇಕು ಅಂತ ಇಂಟಲಿಜೆನ್ಸ್'ನವರು ಕರೆ ಮಾಡಿದ್ದರು. ಹೀಗಾಗಿ ಬಂದು ಮಾಹಿತಿ ನೀಡಿದ್ದೇನೆ ಎಂದು ಸುನೀಲ್ ಹೆಗ್ಗರವಳ್ಳಿ ಸುವರ್ಣ ನ್ಯೂಸ್'ಗೆ ಹೇಳಿದ್ದಾರೆ.

ಈಗಾಗಲೆ ಮನೆಯ ಬಳಿ ಲೋಕಲ್ ಪೊಲೀಸರನ್ನು ಹಾಕಿದ್ದಾರೆ. ಡಿಸಿಪಿ ಶರಣಪ್ಪ ಮುಖಾಂತರ ಸುಬ್ರಹ್ಮಣ್ಯ ಪುರ ಪೊಲೀಸ್ ಪೇದೆಗಳನ್ನು ಹಾಕಿದ್ದಾರೆ. ನನಗೆ ವಯಸ್ಸಾದ ತಂದೆ ತಾಯಿ ಇದ್ದಾರೆ. ಅವರಿಗೆ ಭದ್ರತೆ ಬೇಕು. ನಮಗೆ ಗನ್ ಮ್ಯಾನ್ ಅಗತ್ಯವಿದೆ. . ಗನ್ ಮ್ಯಾನ್ ಕೊಡುವುದು, ಬಿಡುವುದು ಸರ್ಕಾರಕ್ಕೆ ಬಿಟ್ಟ ವಿಚಾರ ಎಂದು ಸುನೀಲ್ ಹೇಳಿದ್ದಾರೆ.

ರವಿ ಬೆಳಗೆರೆ ಒಬ್ಬ ಪ್ರಭಾವಿ ವ್ಯಕ್ತಿ. ಪೊಲೀಸ್ ಕಸ್ಟಡಿಯಲ್ಲಿರುವಾಗಲೇ ನನಗೆ ಕರೆ ಮಾಡಿದ್ದಾರೆ. ಪ್ರಾಸಿಕ್ಯೂಷನ್ ಲಾಕಪ್ ಇದ್ದಾಗಲೇ ಫೋನ್ ಮಾಡಿ ಮಾತಾಡ್ತಾರೆ ಅಂದರೆ ಅವರ ಪ್ರಭಾವ ಇನ್ನೆಷ್ಟು ಇದೆ ನೀವೆ ಹೇಳಿ. ಹೀಗಾಗಿ ಭದ್ರತೆ ಕೋರಿದ್ದೇನೆ. ನ್ಯಾಯಾಲಯ ಎಲ್ಲದಕ್ಕಿಂತ ದೊಡ್ಡದು. ಜಾಮೀನು ಕೊಡೋದು ಬಿಡೋದು ನ್ಯಾಯಾಲಯಕ್ಕೆ ಬಿಟ್ಟ ವಿಚಾರ ಎಂದಿದ್ದಾರೆ.