ರಾಜ್ಯ ಪೊಲೀಸರಿಗೆ ಶೇ. 22ರಷ್ಟು ವೇತನ ಹೆಚ್ಚಳಕ್ಕೆ ಸಮಿತಿ ಶಿಫಾರಸು

ಬೆಂಗಳೂರು(ಸೆ.26): ರಾಜ್ಯ ಪೊಲೀಸರಿಗೆ ಸರ್ಕಾರ ದಸರಾ ಹಬ್ಬಕ್ಕೆ ಭರ್ಜರಿ ಉಡುಗೊರೆ ನೀಡಿದೆ. ಅಕ್ಟೋಬರ್ ತಿಂಗಳಿಗೆ ​​​​​​​​​​​​​ಪೊಲೀಸರ ವೇತನ ಹೆಚ್ಚಳ ಖಚಿತವಾಗಿದೆ. ಪೊಲೀಸರ ವೇತನ ಪರಿಷ್ಕರಣೆ ಕುರಿತ ವರದಿಯನ್ನ ಸರ್ಕಾರಕ್ಕೆ ಎಡಿಜಿಪಿ ರಾಘವೇಂದ್ರ ಔರಾದ್ಕರ್​​​ ಸಲ್ಲಿಸಿದ್ದಾರೆ. ಡಿಪಿಜಿ ಓಂ ಪ್ರಕಾಶ್, ನಗರ ಪೊಲಿಸ್ ಆಯುಕ್ತ ಎಂ.ಎನ್. ಮೇಘರಿಕ್ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಗೃಹ ಸಚಿವ ಡಾ. ಪರಮೇಶ್ವರ್​ಗೆ ವರದಿ ಸಲ್ಲಿಸಿದ್ದಾರೆ.

ರಾಜ್ಯ ಪೊಲೀಸರಿಗೆ ಶೇ. 22ರಷ್ಟು ವೇತನ ಹೆಚ್ಚಳಕ್ಕೆ ಸಮಿತಿ ಶಿಫಾರಸು ಮಾಡಿದೆ. ಸಮಿತಿಯ ವರದಿ ಆಧರಿಸಿ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ. ಇನ್ನು 3 ರಾಜ್ಯಗಳಾದ ಕೇರಳ, ಆಂಧ್ರ ಪ್ರದೇಶ, ಮತ್ತು ಪಶ್ಚಿಮ ಬಂಗಾಳ ಪೊಲೀಸ್​​ ಇಲಾಖೆಯ ವೇತನ ಆಧರಿಸಿ ರಾಜ್ಯ ಪೊಲೀಸ್​ ವೇತನ ಪರೀಷ್ಕರಣೆ ಸಮಿತಿ ಸರ್ಕಾರಕ್ಕೆ ವರದಿ ನೀಡಿದೆ.