* ಗೌರಿ ಹತ್ಯೆ ಬಗ್ಗೆ ಮಾಹಿತಿ ಕೊಡಿ ಎಂದರೆ ಸಲಹೆ ಕೊಟ್ಟ ಸಾರ್ವಜನಿಕರು* ಗೌರಿ ಹತ್ಯೆ ಬಗ್ಗೆ ಮಾಹಿತಿ ಇದ್ದರೆ ತಿಳಿಸುವಂತೆ ಕೋರಿದ್ದ ಪೊಲೀಸರು* ತನಿಖೆ ಯಾವ ರೀತಿ ಮಾಡಬೇಕು ಎಂದು ಎಸ್​ಐಟಿ ಅಧಿಕಾರಿಗಳಿಗೆ ಪಾಠ* ಹತ್ಯೆ ಬಗ್ಗೆ ಮಾಹಿತಿ ಇದೆಯಾ ಎಂದು ಪ್ರಶ್ನಿಸಿದರೆ ಕರೆ ಕಡಿತಗೊಳಿಸುತ್ತಿರುವ ಸಾರ್ವಜನಿಕರು* 9480800202 ಹಾಗೂ sit.glankesh@ksp.gov.in ಗೆ ಮಾಹಿತಿ ನೀಡುವಂತೆ ಮನವಿ

ಬೆಂಗಳೂರು(ಸೆ. 10): ವಿಚಾರವಾದಿ, ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಬಗ್ಗೆ ಪೊಲೀಸರು, ಸಾರ್ವಜನಿಕರಿಂದ ಮಾಹಿತಿ ಅಥವಾ ಸುಳಿವು ಕೊಟ್ರೆ 1 ಲಕ್ಷ ರೂಪಾಯಿ ಬಹುಮಾನ ಕೊಡುವುದಾಗಿ ಸರಕಾರ ಘೋಷಣೆಯನ್ನೇನೋ ಮಾಡಿತು. ಸಾರ್ವಜನಿಕರಿಂದ ಸಾಕಷ್ಟು ಕರೆಗಳು ಬರುತ್ತಿವೆ. ಆದರೆ, ಯಾವುದೂ ಕೂಡ ಕೇಸ್'ಗೆ ಸಹಾಯವಾಗದ ಮಾತುಗಳೇ. ಮಾಹಿತಿ ನೀಡುವ ಬದಲು ಜನರು ಬಿಟ್ಟಿ ಸಲಹೆ ಕೊಡುತ್ತಿದ್ದಾರಂತೆ. ತನಿಖೆ ಯಾವ ರೀತಿ ಮಾಡಬೇಕು ಎಂದು ಎಸ್'ಐಟಿ ಅಧಿಕಾರಿಗಳಿಗೆ ಜನರು ಪಾಠ ಹೇಳ್ತಿದ್ದಾರೆ.

ಇನ್ನು, ಪೊಲೀಸರೇ ಖುದ್ದಾಗಿ ಸಾರ್ವಜನಿಕರನ್ನು ಸಂಪರ್ಕಿಸಿ ಗೌರಿ ಹಂತಕರ ಸುಳಿವಿನ ಬಗ್ಗೆ ಪ್ರಶ್ನಿಸಿದ್ರೆ, ಕೆಲವರು ಕರೆಯನ್ನೇ ಕಟ್ ಮಾಡುತ್ತಿದ್ದಾರೆ. ಆದರೆ, ಕೆಲ ಸಾರ್ವಜಿನಿಕರು ತನಿಖೆಗೆ ಸ್ಪಂದನೆ ನೀಡುತ್ತಿದ್ದು, ಶನಿವಾರ ಒಂದೇ ದಿನ 55 ಜನರು ಪೊಲೀಸರ ತನಿಖೆ ಸ್ಪಂದಿಸಿದ್ದಾರೆ. ಹೆಚ್ಚಿನ ತನಿಖೆಗೆ ಸಹಕರಿಸಲು ಅಧಿಕಾರಿಗಳು ಸಾರ್ವಜನಿಕರಿಗೆ ಮನವಿ ಮಾಡಿದ್ದು, 9480800202 ಸಂಖ್ಯೆಗೆ ಕರೆ ಮಾಡಿ ಅಥವಾ sit.glankesh@ksp.gov.in ಗೆ ಇ-ಮೇಲ್​ ಮಾಡುವ ಮೂಲಕವಾದ್ರು ಮಾಹಿತಿ ನೀಡುವಂತೆ ಮನವಿ ಮಾಡಿದ್ದಾರೆ.