ಯಾರೊಬ್ಬರು ಮನೆಯ ಬಾಗಿಲು ತೆಗೆಯದೆ ಸತಾಯಿಸುತ್ತಿದ್ದಾಗ ಸುತ್ತಿಗೆಯಿಂದ ಕಿಟಿಕಿ ಮುರಿದು ಒಳನುಗ್ಗಿ ಶೋಧ ನಡೆಸಿದ್ದು,ಮನೆಯಲ್ಲಿ ರದ್ದುಗೊಂಡಿರುವ 500,1000 ರೂ.ಮುಖಬೆಲೆಯ ಕೊಟ್ಯಂತರ ರೂ. ನೋಟು ಪತ್ತೆಯಾಗಿದೆ.

ಬೆಂಗಳೂರು(ಏ.14): ಮಾಜಿ ರೌಡಿಶೀಟರ್ ನಾಗನ ಮನೆಯ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ವ್ಯಕ್ತಿಯೊಬ್ಬರ ಅಪಹರಣಕ್ಕೆ ಸಂಬಂಧಿಸಿದಂತೆ ಎಸಿಪಿ ಬಡಿಗೇರ್ ನೇತೃತ್ವದಲ್ಲಿ ಶ್ರೀರಾಂ'ಪುರದ ಆತನ ಮನೆಯ ಮೇಲೆ ಸರ್ಚ್ ವಾರಂಟ್'ನೊಂದಿಗೆ 40ಕ್ಕೂ ಹೆಚ್ಚು ಪೊಲೀಸರು ಬಾಗಿಲು ಮುರಿದು ಒಳನುಗ್ಗಿದ್ದಾರೆ.

ಯಾರೊಬ್ಬರು ಮನೆಯ ಬಾಗಿಲು ತೆಗೆಯದೆ ಸತಾಯಿಸುತ್ತಿದ್ದಾಗ ಸುತ್ತಿಗೆಯಿಂದ ಕಿಟಿಕಿ ಮುರಿದು ಒಳನುಗ್ಗಿ ಶೋಧ ನಡೆಸಿದ್ದು,ಮನೆಯಲ್ಲಿ ರದ್ದುಗೊಂಡಿರುವ 500,1000 ರೂ.ಮುಖಬೆಲೆಯ ಕೊಟ್ಯಂತರ ರೂ. ನೋಟು ಪತ್ತೆಯಾಗಿದೆ. ಪೊಲೀಸರು ಆತನ ಪತ್ತೆಗೆ ಮತ್ತಷ್ಟು ಶೋಧ ನಡೆಸಿದ್ದಾರೆ. ಮನೆಯ ಸುತ್ತ ಖಾಕಿ ಸರ್ಪಗಾವಲು ಹಾಕಲಾಗಿದೆ.