ಇನ್ಸಪೆಕ್ಟರ್ ಯು.ಬಿ. ಚಿಕ್ಕಮಠ ನೇತೃತ್ವದಲ್ಲಿ ದಾಳಿ ನಡೆಸಿದ ಅಧಿಕಾರಿಗಳು, ಬಿದರಿ ಗ್ರಾಮದಲ್ಲಿರುವ ಹಾಲಿನ ಘಟಕವನ್ನು ಮುಟ್ಟುಗೋಲು ಹಾಕಿ, ಶಶಿಕಾಂತ್ ಪೂಜಾರಿ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ. 

ಬಾಗಲಕೋಟೆ (ಮಾ.19): ಬಾಗಲಕೋಟೆ ಜಿಲ್ಲಾ ಅಪರಾಧ ಪತ್ತೆ ದಳವು ಮಾರುವೇಷದಲ್ಲಿ ದಾಳಿ ಮಾಡಿ ಕಲಬೆರಕೆ ಹಾಲು ಮಾರಾಟ ಮಾಡುತ್ತಿದ್ದ ಘಟಕವನ್ನು ಮುಟ್ಟುಗೋಲು ಹಾಕಿದೆ.

Add Asianetnews Kannada as a Preferred SourcegooglePreferred

ಇನ್ಸಪೆಕ್ಟರ್ ಯು.ಬಿ. ಚಿಕ್ಕಮಠ ನೇತೃತ್ವದಲ್ಲಿ ದಾಳಿ ನಡೆಸಿದ ಅಧಿಕಾರಿಗಳು, ಬಿದರಿ ಗ್ರಾಮದಲ್ಲಿರುವ ಹಾಲಿನ ಘಟಕವನ್ನು ಮುಟ್ಟುಗೋಲು ಹಾಕಿ, ಶಶಿಕಾಂತ್ ಪೂಜಾರಿ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ. 

ನಾರಾಯಣ ಎಂಬವರಿಗೆ ಸೇರಿದ ಈ ಹಾಲಿನ ಘಟಕದಲ್ಲಿ ಹಾಲಿಗೆ ಕಾಸ್ಟಿಕ್ ಸೋಡಾ, ಕೆಮಿಕಲ್ ಬೆರೆಸಿ ಮಾರಾಟ ಮಾಡ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಪೊಲೀಸರು, 36 ಕ್ಯಾನ್ ಕಲಬೆರೆಕೆ ಹಾಲು ಮತ್ತು ಒಂದು ವಾಹನವನ್ನು ಜಪ್ತಿ ಮಾಡಿದ್ದಾರೆ.