ಪಾಕಿಸ್ತಾನದ ಪಂಜಾಬ್ ಪೊಲೀಸ್ ಅಧಿಕಾರಿಯೊಬ್ಬರ ವಿಡಿಯೋ ಒಂದು ವೈರಲ್ ಆಗಿದ್ದು, ಇದು ಬಹುತೇಕರನ್ನು ಅಚ್ಚರಿಗೊಳಿಸಿದೆ. ಸಮವಸ್ತ್ರದಲ್ಲೇ ಇದ್ದ ಪೊಲೀಸ್ ಅಧಿಕಾರಿ ಮಹಿಳೆ ಜೊತೆ ಬಿಂದಾಸ್ ಆಗಿ ಸೊಂಟ ಬಳುಕಿಸಿದ್ದಾರೆ. ಈ ಅಧಿಕಾರಿಯ ಹೆಸರು ಅರ್ಶದ್ ಎಂದು ತಿಳಿದು ಬಂದಿದೆ. 'ದ ಟ್ರಿಬ್ಯೂನ್' ಪ್ರಕಟಿಸಿರುವ ವರದಿಯನ್ವಯ ಇವರು ಕಲ್ಯಾನಾ ಪೊಲೀಸ್ ಠಾಣೆಯ ಎಸ್‌ಎಚ್‌ಒ ಆಗಿದ್ದಾರೆ. ಮಹಿಳೆ ಹಾಗೂ ಅರ್ಶದ್, ನಟ ಗೋವಿಂದರವರ 'ಕಿಸೀ ಹಿಸ್ಕೋ ಮೆಂ ಜಾಯೆ' ಎಂಬ ಹಾಡಿಗೆ ಹೆಜ್ಜೆ ಹಾಕಿರುವುದು ಗಮನಿಸಬಹುದಾಗಿದೆ.

ಇನ್ನು ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಅಲ್ಲಿನ ಸ್ಥಳೀಯ ಸುದ್ದಿ ವಾಹಿನಿಗಳಲ್ಲಿ ಪ್ರಸಾರವಾಗಿದ್ದು, ಇದಾದ ಕೆಲವೇ ಕ್ಷಣಗಳಲ್ಲಿ ಪೊಲೀಸ್ ಇಲಾಖೆಯು ಅಧಿಕಾರಿಯನ್ನು ಅಮಾನತ್ತುಗೊಳಿಸಿ ತನಿಖೆ ನಡೆಸಲು ಆದೇಶಿಸಿದೆ. ಆದರೆ ವಿಡಿಯೋದಲ್ಲಿರುವ ವ್ಯಕ್ತಿ ಮಾತ್ರ ತಾನು ಪೊಲೀಸ್ ಅಧಿಕಾರಿಯಲ್ಲ, ಕೇವಲ ಡ್ಯಾನ್ಸ್ ಮಾಡುವ ಸಲುವಗಿ ಪೊಲೀಸ್ ಸಮವಸ್ತ್ರ ಧರಿಸಿದ್ದೆ ಎಂದು ಸ್ಪಷ್ಟನೆ ನೀಡಿದ್ದಾರೆ