ಬೆಂಗಳೂರಲ್ಲಿ ಕಡಬಗೆರೆ ಸೀನನ ಮೇಲೆ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರತಿಪರ ಹೋರಾಟಗಾರ ಅಗ್ನಿ ಶ್ರೀಧರ್'ರವರ ಕುಮಾರಸ್ವಾಮಿ ಲೇಔಟ್ನಲ್ಲಿರುವ ಮನೆ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.
ಬೆಂಗಳೂರು(ಫೆ.07): ಬೆಂಗಳೂರಲ್ಲಿ ಕಡಬಗೆರೆ ಸೀನನ ಮೇಲೆ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರತಿಪರ ಹೋರಾಟಗಾರ ಅಗ್ನಿ ಶ್ರೀಧರ್'ರವರ ಕುಮಾರಸ್ವಾಮಿ ಲೇಔಟ್ನಲ್ಲಿರುವ ಮನೆ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.
ಈ ಪ್ರಕರಣದ ಆರೋಪಿಯಾಗಿರುವ ರೋಹಿತ್ ಅಲಿಯಾಸ್ ಒಂಟೆ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದು, ಇದೇ ಹಿನ್ನೆಲೆಯಲ್ಲಿ ಆರೋಪಿಯ ಬಂಧನಕ್ಕಾಗಿ ಅಗ್ನಿ ಶ್ರೀಧರ್ ಮನೆ ಮೇಲೆ ದಾಳಿ ನಡೆಸಿದ್ದಾರೆ. ಸೀನನ ಮೇಲೆ ಗುಂಡಿನ ದಸಾಳಿ ನಡೆಯುವ ಎರಡು ದಿನಗಳ ಹಿಂದಷ್ಟೇ ಸೀನನ ಸಹಚರನ ಬಳಿ, ಸೀನನ್ನು ಮುಗಿಸುವುದಾಗಿ ರೋಹಿತ್ ಕೊಲೆ ಬೆದರಿಕೆ ಹಾಕಿದ್ದನಂತೆ. ಈ ಕೊಲೆ ಬೆದರಿಕೆ ಹಾಕಿದ್ದರಿಂದ ಗುಂಡಿನ ದಾಳಿಯ ಹಿಂದೆ ಕೈವಾಡ ಇದೆ ಎನ್ನುವ ಶಂಕೆ ವ್ಯಕ್ತವಾಗಿದೆ.
ಇನ್ನು ಆರೋಪಿ ರೋಹಿತ್'ಗೆ ಪ್ರಗತಿಪರ ಹೋರಾಟಗಾರ ಅಗ್ನಿ ಶ್ರೀಧರ್ ಆಶ್ರಯ ನೀಡಿದ್ದಾರೆ ಎಂಬ ಅನುಮಾನದ ಮೇರೆಗೆ 100 ಕ್ಕೂ ಹೆಚ್ಚು ಪೊಲೀಸರು ದಾಳಿ ನಡೆಸಿದ್ದಾರೆ. ಇದಕ್ಕಾಗಿ ಯಲಹಂಕ ಪೊಲೀಸರು ಕೋರ್ಟ್'ನಿಂದ ಸರ್ಚ್ ವಾರೆಂಟ್ ಪಡೆದಿದ್ದರು ಎಂದು ತಿಳಿದು ಬಂದಿದೆ.
