ಮಳೆಗಾಗಿ ದೇವರ ಮೊರೆ ಹೋದ ಪೊಲೀಸರುಶನಿ ಮಹಾತ್ಮಾ ದೇವರಿಗೆ ಸಾಮೂಹಿಕವಾಗಿ ವಿಶೇಷ ಪೂಜೆ ಪಾವಗಡದಲ್ಲಿ 4 ಠಾಣೆಗಳ ಪೊಲೀಸರಿಂದ ಪೂಜೆನೂರಕ್ಕೂ ಹೆಚ್ಚು ಪೊಲೀಸರು ಪೂಜೆಯಲ್ಲಿ ಭಾಗಿ

ತುಮಕೂರು (ಜೂ.07): ಮಳೆಗಾಗಿ ಪೊಲೀಸರೇ ದೇವರ ಮೊರೆ ಹೋದ ಘಟನೆ ತುಮಕೂರು ಜಿಲ್ಲೆ ಪಾವಗಡ ತಾಲೂಕಿನಲ್ಲಿ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಳೆಗಾಗಿ ಪೊಲೀಸರು ಸೇರಿ ಶನಿ ಮಹಾತ್ಮಾ ದೇವರಿಗೆ ಸಾಮೂಹಿಕವಾಗಿ ವಿಶೇಷ ಪೂಜೆ ಸಲ್ಲಿಸಿದ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.

ಕಳೆದ ಒಂದು ತಿಂಗಳ ಹಿಂದೆ ಪಾವಗಡ ಪಟ್ಟಣ, ತಿರುಮಣಿ, ವೈ ಎನ್ ಹೊಸಕೋಟೆ ಹಾಗೂ ಅರಸಿಕೆರೆ ಸೇರಿ ನಾಲ್ಕೂ ಠಾಣೆಯ ಪೊಲೀಸರು ಪಟ್ಟಣದ ಶನಿಮಹಾತ್ಮ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಮಳೆಗಾಗಿ ಪ್ರಾರ್ಥಿಸಿದ್ದಾರೆ. ಸಿಪಿಐ ಆನಂದ್ ಮತ್ತು ಶ್ರೀ ಶೈಲ ಸೇರಿದಂತೆ ನೂರಕ್ಕೂ ಹೆಚ್ಚು ಪೊಲೀಸರು ಭಾಗಿಯಾಗಿದ್ದಾರೆ.

ಪಾವಗಡ ತಾಲೂಕಿನಲ್ಲಿ ಮಳೆಯಿಲ್ಲದೆ ನೀರಿನ ಸಮಸ್ಯೆ ತಲೆದೋರಿತ್ತು, ನೀರಿಲ್ಲದೆ ಬೆಳೆಗಳು ಒಣಗಿಹೋಗಿತ್ತು ಅಲ್ಲದೆ ಬಿಸಿಲ ತಾಪದಿಂದ ಜನರು ತತ್ತರಿಸಿ ಹೋಗಿದ್ದಾರೆ. ಈ ಹಿನ್ನಲೆಯಲ್ಲಿ ಪೊಲೀಸರು ವೈಯಕ್ತಿಕವಾಗಿ ವಂತಿಗೆ ಸಂಗ್ರಹಿಸಿ ವರುಣನ ಕೃಪೆಗಾಗಿ ದೇವರ ಮೊರೆಹೊಗಿದ್ದಾರೆ.