ಪೊಲೀಸಪ್ಪನೊಬ್ಬ ಬೇಜವಾಬ್ದಾರಿಯುತವಾಗಿ ನಡೆದುಕೊಂಡು ಪೊಲೀಸ್ ಇಲಾಖೆಯ ಪ್ರತಿಷ್ಟಗೆ ದಕ್ಕೆ ಉಂಟು ಮಾಡಿರುವ ಉತ್ತರ ಪ್ರದೇಶದಲ್ಲಿ ನಡೆದಿದೆ.

ಉತ್ತರಪ್ರದೇಶ(ಎ.04): ಪೊಲೀಸಪ್ಪನೊಬ್ಬ ಬೇಜವಾಬ್ದಾರಿಯುತವಾಗಿ ನಡೆದುಕೊಂಡು ಪೊಲೀಸ್ ಇಲಾಖೆಯ ಪ್ರತಿಷ್ಟಗೆ ದಕ್ಕೆ ಉಂಟು ಮಾಡಿರುವ ಉತ್ತರ ಪ್ರದೇಶದಲ್ಲಿ ನಡೆದಿದೆ.

ಒಂದೆಡೆ ಬೇಜವಾಬ್ದಾರಿಯಿಂದ ನಡೆದುಕೊಳ್ಳುವ ಅಧಿಕಾರಿಗಳನ್ನು ಸರಿ ದಾರಿಗೆ ಕರೆತರಲು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಶ್ರಮಿಸುತ್ತಿದ್ದರೆ ಇತ್ತ ಅಮೇಥಿಯ ಪೊಲೀಸ್ ಅಧಿಕಾರಿಯೊಬ್ಬ ಅಪರಾಧಿಯೊಬ್ಬ ಉದ್ದಟತನ ಮೆರೆದಿದ್ದಾರೆ. ಅಮೇಥಿಯ ಶುಕ್ಲಾ ಬಜಾರ್ ಠಾಣೆಯ ಪೊಲೀಸ್ ಅಧಿಕಾರಿ ಸಂಜಯ್ ಸಿಂಗ್ ಎಂಬಾತ ದೂರು ನೀಡಲು ಬಂದ ಜನರಿಂದ ಮಸಾಜ್ ಮಾಡಿಸಿಕೊಳ್ಳುವ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಸಾಮಾಜಿಕ ಜಾಲಾತಾಣಗಳಲ್ಲಿ ಪೊಲೀಸ್ ಅಧಿಕಾರಿಯ ಈ ದುರ್ವರ್ತನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.