Asianet Suvarna News Asianet Suvarna News

ಪೊಲೀಸರ ಮೇಲೆ ಹಲ್ಲೆ : ರೌಡಿಶೀಟರ್’ಗೆ ಬಂದೂಕಿನ ಪಾಠ

ಹಲ್ಲೆಕೋರರ ಮೇಲೆ ಗುಂಡು ಹಾರಿಸಿ ಎಂದು ಆಯುಕ್ತರು ಆದೇಶಿದ ಬೆನ್ನಲ್ಲೇ ಜೆ.ಜೆ. ನಗರ ಠಾಣೆ ಪೊಲೀಸರು, ಇತ್ತೀಚಿಗೆ ಪಾದರಾಯನಪುರದಲ್ಲಿ ಹೊಯ್ಸಳ ವಾಹನದ ಚಾಲಕ ರಾಜೇಂದ್ರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದ ರೌಡಿಶೀಟರ್‌ಗೆ ‘ಬಂದೂಕಿನ ಪಾಠ’ ಹೇಳಿದ್ದಾರೆ.

Police Firing On Rowdy Sheeter

ಬೆಂಗಳೂರು (ಜ.25) : ಹಲ್ಲೆಕೋರರ ಮೇಲೆ ಗುಂಡು ಹಾರಿಸಿ ಎಂದು ಆಯುಕ್ತರು ಆದೇಶಿದ ಬೆನ್ನಲ್ಲೇ ಜೆ.ಜೆ. ನಗರ ಠಾಣೆ ಪೊಲೀಸರು, ಇತ್ತೀಚಿಗೆ ಪಾದರಾಯನಪುರದಲ್ಲಿ ಹೊಯ್ಸಳ ವಾಹನದ ಚಾಲಕ ರಾಜೇಂದ್ರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದ ರೌಡಿಶೀಟರ್‌ಗೆ ‘ಬಂದೂಕಿನ ಪಾಠ’ ಹೇಳಿದ್ದಾರೆ.

ಉಲ್ಲಾಳ ಸಮೀಪದ ಚಿಕ್ಕಬಸ್ತಿಯ ನೈಸ್ ರಸ್ತೆ ಸಮೀಪ ಈ ಗುಂಡಿನ ದಾಳಿ ನಡೆದಿದ್ದು, ಗುಂಡೇಟಿನಿಂದ ಗಾಯಗೊಂಡಿರುವ ಪಾದರಾಯನಪುರ ರೌಡಿಶೀಟರ್ ಅಲೀಮ್ ಖಾನ್ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಹೊಯ್ಸಳ ಸಿಬ್ಬಂದಿ ಮೇಲಿನ ಹಲ್ಲೆ ಪ್ರಕರಣದಲ್ಲಿ ಬಂಧಿಸಲು ತೆರಳಿದ ಪೊಲೀಸರ ಮೇಲೆ ಮತ್ತೆ ಮಾರಕಾಸ್ತ್ರದಿಂದ ಆರೋಪಿ ದಾಳಿಗೆ ಮುಂದಾಗಿದ್ದ. ಆಗ ಆತ್ಮರಕ್ಷಣೆಗೆ ಜೆ.ಜೆ.ನಗರ ಠಾಣೆ ಇನ್ಸ್‌ಪೆಕ್ಟರ್ ಲಿಂಗರಾಜು ಸರ್ವಿಸ್ ಪಿಸ್ತೂಲ್‌ನಿಂದ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಠಾಣೆ ಕರೆ ಮಾಡಿ ಇನ್ಸ್‌ಪೆಕ್ಟರ್‌ಗೆ ಬೆದರಿಕೆ: ಪಾದರಾಯನಪುರದಲ್ಲಿ ಜನವರಿ 16ರಂದು ಅಲೀಂ ಹಾಗೂ ಆತನ ಸ್ನೇಹಿತರು ಮದ್ಯ ಸೇವಿಸಿ ರಸ್ತೆಯಲ್ಲಿ ಗಲಾಟೆ ಮಾಡುತ್ತಿದ್ದರು. ಈ ವಿಚಾರ ತಿಳಿದು ಸ್ಥಳಕ್ಕೆ ತೆರಳಿದ ಹೊಯ್ಸಳ ಸಿಬ್ಬಂದಿ, ಗಲಾಟೆ ಮಾಡದೆ ಮನೆಗೆ ತೆರಳುವಂತೆ ಸೂಚಿಸಿದ್ದರು. ಆದರೆ, ಈ ಮಾತಿಗೆ ಕೆರಳಿದ ಅಲೀಂ, ರಾಜೇಂದ್ರನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದ. ಈ ಕೃತ್ಯದ ಬಳಿಕ ಅಜ್ಮೇರ್‌ಗೆ ತೆರಳಿದ್ದ ಆತ, ಮಂಗಳವಾರ ರಾತ್ರಿ ನಗರಕ್ಕೆ ಬಂದು   ದೊಡ್ಡ ಬಸ್ತಿಯಲ್ಲಿರುವ ಸೋದರ ಮಾವನ ಮನೆಯಲ್ಲಿ ವಾಸ್ತವ್ಯ ಹೂಡಿದ್ದ.

ಮರುದಿನ ಬೆಳಗ್ಗೆ ಕಾಯಿನ್ ಬಾಕ್ಸ್‌ನಿಂದ ಜಗಜೀವನ್ ರಾಮ್ ನಗರ ಠಾಣೆಗೆ ಕರೆ ಮಾಡಿದ ಗೂಂಡಾ ಕಾಯ್ದೆ ಹಲವು ವರ್ಷಗಳಿಂದ ರೌಡಿ ಚಟುವಟಿಕೆಯಲ್ಲಿ ಅಲೀಂ ತೊಡಗಿದ್ದು, ಆತನ ವಿರುದ್ಧ ಕೊಲೆ, ಕೊಲೆ ಯತ್ನ, ಸರ್ಕಾರಿ ಅಧಿಕಾರಿ ಮೇಲೆ ಹಲ್ಲೆ, ದರೋಡೆ ಸೇರಿದಂತೆ ಬ್ಯಾಟರಾಯನಪುರ, ಜಗಜೀವನ್ ರಾಮನಗರ ಹಾಗೂ ವಿಜಯನಗರ ಠಾಣೆಗಳಲ್ಲಿ ಆರು ಪ್ರಕರಣಗಳು ದಾಖಲಾಗಿವೆ. 2013ರಲ್ಲಿ ಕೂಡ ಕರ್ತವ್ಯ ನಿರತ ಕಾನ್‌ಸ್ಟೇಬಲ್ ಮೇಲೆ ಆತ ಹಲ್ಲೆ ನಡೆಸಿದ್ದ. ಈ ಕ್ರಿಮಿನಲ್ ಕೃತ್ಯಗಳ ಹಿನ್ನೆಲೆಯಲ್ಲಿ ಅಲೀಂ ವಿರುದ್ಧ ಗೂಂಡಾ ಕಾಯ್ದೆ ಪ್ರಯೋಗಿಸಲು ನಿರ್ಧರಿಸಲಾಗಿದೆ. ಎಂದು ಪೊಲೀಸರು ಹೇಳಿದ್ದಾರೆ.

ಅಲೀಂ, ‘ಲೇ ನಿಮ್ಮ ಇನ್ಸ್‌ಪೆಕ್ಟರ್ ಏನೋ ನನ್ನನ್ನು ಹುಡುಕುತ್ತಿದ್ದಾನಂತೆ. ಅವನಿಗೆ ಹೇಳಿ ಸುಮ್ಮನೆ ಇದ್ದರೆ ಸರಿ. ಇಲ್ಲಾ ಒಂದು ಗತಿ ಕಾಣಿಸುತ್ತೇನೆ’ ಎಂದು ಬೆದರಿಸಿದ್ದ. ಈ ಧಮ್ಕಿ ಸಂಗತಿಯನ್ನು ಇನ್ಸ್‌ಪೆಕ್ಟರ್ ಲಿಂಗರಾಜ್ ಅವರಿಗೆ ಸಿಬ್ಬಂದಿ ತಿಳಿಸಿದ್ದರು. ಈ ಬೆದರಿಕೆ ಕರೆ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಪಶ್ಚಿಮ ವಿಭಾಗದ ಡಿಸಿಪಿ ಎಂ.ಎನ್. ಅನುಚೇತ್ ಅವರು, ಆರೋಪಿ ಪತ್ತೆಗೆ ಮೂರು ವಿಶೇಷ ತಂಡಗಳನ್ನು ರಚಿಸಿದ್ದರು ಎಂದು ತಿಳಿದು ಬಂದಿದೆ.

ಈ ತನಿಖಾ ತಂಡಗಳು, ಈ ಬೆದರಿಕೆ ಕರೆಯನ್ನು ಪರಿಶೀಲಿಸಿದರು. ಆಗ ಆ ಸಂಖ್ಯೆಗೆ ಕಾಯಿನ್ ಬೂತ್ ಗೆ ವಾಪಸ್ ಕರೆ ಮಾಡಿದಾಗ, ದೊಡ್ಡಬಸ್ತಿಯಿಂದ ಕರೆ ಬಂದಿರುವ ವಿಚಾರ ತಿಳಿಯತು. ಕೂಡಲೇ ವಿಶೇಷ ತಂಡಗಳು, ಅಲ್ಲಿಗೆ ತೆರಳಿ ಆರೋಪಿಗೆ ಹುಡುಕಾಟ ನಡೆಸಿದ್ದರು. ಇದೇ ವೇಳೆ ಆರೋಪಿ, ತನ್ನ ಸ್ನೇಹಿತನ ಬೈಕ್‌ನಲ್ಲಿ ಚಿಕ್ಕ ಬಸ್ತಿಗೆ ಬಂದಿದ್ದ. ಪೊಲೀಸ್ ಜೀಪ್ ಅನ್ನು ನೋಡುತ್ತಿದ್ದಂತೆಯೇ ಬೈಕ್‌ನಿಂದ ಇಳಿದು ನಿರ್ಜನ ಪ್ರದೇಶದ ಕಡೆಗೆ ಆತ ಓಡಲಾರಂಭಿಸಿದ. 

ಆಗ ಅಲೀಂನನ್ನು ಕಂಡ ಲಿಂಗರಾಜ್ ನೇತೃತ್ವದ ತಂಡವು, ಕೂಡಲೇ ಜೀಪ್ ನಿಲ್ಲಿಸಿ ಆತನನ್ನು ಬೆನ್ನಟ್ಟಿದೆ. ಕೊನೆಗೆ ಆತನನ್ನು ಅಡ್ಡಗಟ್ಟಿದ ಕಾನ್ ಸ್ಟೇಬಲ್ ವೆಂಕಟೇಶ್ ಅವರು, ಅಲೀಂ ಕೊರಳ ಪಟ್ಟಿಗೆ ಕೈ ಹಾಕುತ್ತಿದ್ದಂತೆಯೇ, ಆರೋಪಿ ಮಚ್ಚಿನಿಂದ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಕೂಡಲೇ ಎಚ್ಚೆತ್ತ ಇನ್ಸ್‌ಪೆಕ್ಟರ್ ಲಿಂಗರಾಜು, ಮೂರು ಸುತ್ತು ಗುಂಡು ಹಾರಿಸಿದರು. ಆಗ ಅಲೀಂನಿಗೆ ಒಂದು ಗುಂಡು ತೊಡೆಯನ್ನು ಸೇರಿದರೆ, ಮತ್ತೊಂದು ಮೊಣಕಾಲಿನ ಕೆಳಭಾಗದಲ್ಲಿ ಹೊಕ್ಕಿತು.

ರಕ್ತಸ್ರಾವವಾಗಿ ಕುಸಿದು ಬಿದ್ದ ಆತನನ್ನು ವಿಕ್ಟೋರಿಯಾ ಆಸ್ಪತ್ರೆಗೆ ಹಾಗೂ ಹಲ್ಲೆಯಿಂದ ಗಾಯಗೊಂಡ ವೆಂಕಟೇಶ್ ಅವರನ್ನು ರಾಜರಾಜೇಶ್ವರಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ. ಪೊಲೀಸರ ಮೇಲಿನ ಹಲ್ಲೆ ಪ್ರಕರಣಗಳನ್ನು ಗಂಭೀರವಾಗಿ ತೆಗೆದುಕೊಂಡ ಪೊಲೀಸ್ ಆಯುಕ್ತರು, ತಮ್ಮ ಮೇಲೆ ಹಲ್ಲೆಗೆ ಮುಂದಾಗುವ ಕಿಡಿಗೇಡಿಗಳ ವಿರುದ್ಧ ಗುಂಡು ಹಾರಿಸುವಂತೆ ಆದೇಶಿಸಿದ್ದರು.

Follow Us:
Download App:
  • android
  • ios