ಬೆಂಗಳೂರು[ಜೂ.20]: ಪೊಲಿಸರ ಮೇಲೆ ಹಲ್ಲೆಗೆ ಮುಂದಾದ ಇಬ್ಬರು ಪುಂಡರ ಮೇಲೆ ಗುಂಡು ಹಾರಿಸಿದ ಘಟನೆ ರಾಜಗೋಪಾಲನಗರದ ಕರೀಂ ಸಾಬ್ ಲೇಔಟ್'ನಲ್ಲಿ ನಡೆದಿದೆ.

ಮನೆ ಮುಂದೆ ನಿಲ್ಲಿಸಿದ್ದ 20 ಕ್ಕೂ ಹೆಚ್ಚು ವಾಹನಗಳ ಗ್ಲಾಸ್ ಪುಡಿ ಪುಡಿ ಮಾಡಿದ್ದ ಈ ಇಬ್ಬರು ಪುಂಡರನ್ನು ಸಿಸಿಟಿವಿಯಲ್ಲಿ ಪೊಲೀಸರು ಪತ್ತೆ ಹಚ್ಚಿ ಇಂದು ಬೆಳಿಗ್ಗೆ ಬಂಧಿಸಲು ಹೋದಾಗ ಮುಖ್ಯ ಪೇದೆ ಹನುಮಂತರಾಜು ಮತ್ತು ಶ್ರೀನಿವಾಸ್ ಮೇಲೆ ಮಾರಕಾಸ್ತ್ರ ಗಳಿಂದ ಹಲ್ಲೆ ನಡೆಸಿದ್ದರು.

ನಂತರ ಶರಣಾಗದೆ ಓಡಿಹೋಗುತ್ತಿದ್ದಾಗ ಮಹಾಲಕ್ಷ್ಮಿ ಲೇಔಟ್ ಇನ್ಸ್ ಪೆಕ್ಟರ್ ಲೋಹಿತ್  ರಫಿ ಮತ್ತು ಸುಧಾಕರ್ ಎಂಬುವವರ ಕಾಲಿಗೆ ಗುಂಡು ಹಾರಿಸಿದ್ದಾರೆ. 2 ದಿನಗಳ ಹಿಂದಷ್ಟೆ 100 ಕ್ಕೂ ಹೆಚ್ಚು ಸರಗಳ್ಳತನದಲ್ಲಿ ಭಾಗಿಯಾಗಿದ್ದ ಅಚ್ಯುತ್ ಕುಮಾರ್ ಗಣಿಯ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದರು.