Asianet Suvarna News Asianet Suvarna News

ಮುತ್ತಪ್ಪ ರೈಗೆ ಮತ್ತೊಂದು ಸಂಕಷ್ಟ

ಮುತ್ತಪ್ಪ ರೈ ಶಸ್ತ್ರಾಸ್ತ್ರಗಳಿಗೆ ಪೂಜೆ ಸಲ್ಲಿಕೆ ವಿವಾದಕ್ಕೆ ಮಹತ್ವದ ತಿರುವುದು ಸಿಕ್ಕಿದ್ದು, ಈ ಸಂಬಂಧ ರೈಗೆ ಭದ್ರತೆ ಒದಗಿಸಿರುವ ಖಾಸಗಿ ಸೆಕ್ಯುರಿಟಿ ಏಜೆನ್ಸಿ ವಿರುದ್ಧ ಸಿಸಿಬಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. 

Police Filed Case Against Security Agency Who Provide Security To Muthappa Rai
Author
Bengaluru, First Published Oct 23, 2018, 12:52 PM IST

ಬೆಂಗಳೂರು : ದಸರಾ ಹಬ್ಬದ ಆಯುಧ ಪೂಜೆ ಅಂಗವಾಗಿ ಕರ್ನಾಟಕ ಅಥ್ಲೇಟಿಕ್ಸ್ ಸಂಸ್ಥೆ ಅಧ್ಯಕ್ಷ ಹಾಗೂ ಜಯ ಕರ್ನಾಟಕ ಸಂಘಟನೆ ಸಂಸ್ಥಾಪಕ ಮುತ್ತಪ್ಪ ರೈ ಶಸ್ತ್ರಾಸ್ತ್ರಗಳಿಗೆ ಪೂಜೆ ಸಲ್ಲಿಕೆ ವಿವಾದಕ್ಕೆ ಮಹತ್ವದ ತಿರುವುದು ಸಿಕ್ಕಿದ್ದು, ಈ ಸಂಬಂಧ ರೈಗೆ ಭದ್ರತೆ ಒದಗಿಸಿರುವ ಖಾಸಗಿ ಸೆಕ್ಯುರಿಟಿ ಏಜೆನ್ಸಿ ವಿರುದ್ಧ ಸಿಸಿಬಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. 

ಮುತ್ತಪ್ಪ ರೈಗೆ ನಗರದ ಹೊರಮಾವು ಸಮೀಪದ ಬ್ಲಾಕ್ ಕ್ಯಾಟ್ ಸೆಕ್ಯುರಿಟಿ ಆ್ಯಂಡ್ ಸರ್ವಿಸಸ್ ಕಂಪನಿಯು ಭದ್ರತೆ ಕಲ್ಪಿಸಿದೆ. 

ಕರ್ನಾಟಕ ಸೆಕ್ಯುರಿಟಿ ಸರ್ವಿಸಸ್ ಕಾಯ್ದೆ 2005 ರ ಉಲ್ಲಂಘಿಸಿದ ಆರೋಪದಡಿ ಆ ಏಜೆನ್ಸಿ ಮಾಲಿಕ ಕೆ.ಪಿ.ವಸಂತ್, ಸಹ ಮಾಲೀಕ ಕೆ.ಎನ್. ಸುಬ್ಬಯ್ಯ, ಸಿ.ಎಸ್.ಭರತ್ ಹಾಗೂ, ರೈ ಅಂಗರಕ್ಷಕರಾದ ಪಿ.ಎಂ.ಕಾವೇರಪ್ಪ, ಸಿ.ಎ.ಗಗನ್, ಎಂ.ಟಿ.ಮೊಣ್ಣಪ್ಪ, ರಂಜಿತ್ ರೈ ಹಾಗೂ ಅಲೋಕ್ ಕುಮಾರ್ ಸಿಂಗ್ ಸೇರಿ ಎಂಟು ಮಂದಿ ವಿರುದ್ಧ ಎಫ್ ಐಆರ್ ದಾಖಲಾಗಿದೆ. ಆದರೆ ಇದರಲ್ಲಿ ರೈ ಹೆಸರು ಉಲ್ಲೇಖವಿಲ್ಲ ಎಂದು ತಿಳಿದು ಬಂದಿದೆ.

Follow Us:
Download App:
  • android
  • ios