ಆರ್. ಆರ್, ನಗರ ಟೆಂಡರ್ ನಕಲಿ ಬಿಲ್ ಸೃಷ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಪಟ್ಟಿ ಸಲ್ಲಿಸಿರುವ ಲೋಕಾಯುಕ್ತ ಪೊಲೀಸರು, ಶಾಸಕ ಮುನಿರತ್ನ ಹಾಗೂ ಪತ್ನಿ ಹೆಸರನ್ನು ಆರೋಪಪಟ್ಟಿಯಿಂದ ಕೈಬಿಟ್ಟಿದ್ದಾರೆ.
ಬೆಂಗಳೂರು: ಆರ್. ಆರ್, ನಗರ ಟೆಂಡರ್ ನಕಲಿ ಬಿಲ್ ಸೃಷ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಪಟ್ಟಿ ಸಲ್ಲಿಸಿರುವ ಲೋಕಾಯುಕ್ತ ಪೊಲೀಸರು, ಶಾಸಕ ಮುನಿರತ್ನ ಹಾಗೂ ಪತ್ನಿ ಹೆಸರನ್ನು ಆರೋಪಪಟ್ಟಿಯಿಂದ ಕೈಬಿಟ್ಟಿದ್ದಾರೆ.
ವೆಂಕಟರತ್ನ ಸೇರಿದಂತೆ 10 ಮಂದಿ ವಿರುದ್ಧ ಜಾರ್ಜ್ ಶೀಟ್ ಸಲ್ಲಿಸಿರುವ ಪೊಲೀಸರು, ಪ್ರಕರಣದಲ್ಲಿ ಶಾಸಕರನ್ನಾಗಲಿ ಅಥವಾ ಪತ್ನಿಯನ್ನಾಗಲಿ ಸಾಕ್ಷಿಯಾಗಿಯೂ ಪರಿಗಣಿಸಿಲ್ಲ.
‘ಎಎಇ ವಿಶ್ವಾಸ್ ನನ್ನ ಮನೆ ನೀಡಲು ಮನವಿ ಮಾಡಿದ್ದರು, ಹಾಗಾಗಿ ಮನೆ ನೀಡಿದ್ದೇನೆ ಎಂದು ಶಾಸಕ ಮುನಿರತ್ನ ಹೇಳಿಕೆ ನೀಡಿದ್ದರು.
ಕ್ಷೇತ್ರದ ವಿವಿಧ ವಾರ್ಡ್'ಗಳ ಕಾಮಗಾರಿಗಳಿಗೆ ಸಂಬಂಧಿಸಿದಂತೆ ನಕಲಿ ಬಿಲ್'ಗಳನ್ನು ಸಿದ್ದಪಡಿಸುತ್ತಿದ್ದಾರೆ ಎಂಬ ಆರೋಪ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಚಿತ್ರೋದ್ಯಮಿ ಮುನಿರತ್ನ ಮೇಲಿತ್ತು.
ಆ ಹಿನ್ನೆಲೆಯಲ್ಲಿ ವೈಯಲಿಕಾವಲ್ನಲ್ಲಿರುವ ಮುನಿರತ್ನ ಮಾಲೀಕತ್ವದ ಮನೆ ಹಾಗೂ ಬಿಬಿಎಂಪಿ ಸಹಾಯಕ ಎಂಜಿನಿಯರ್ ವೆಂಡನ್ ಎಂಬುವವರ ಮನೆ ಮೇಲೆ ದಾಳಿ ನಡೆಸಲಾಗಿತ್ತು.
ಕಾಮಗಾರಿ ನಡೆಯದೇ ಇದ್ದರೂ ನಕಲಿ ಬಿಲ್'ಗಳನ್ನ ಸೃಷ್ಟಿಸಲಾಗುತ್ತಿತ್ತು ಎಂಬ ಆರೋಪ ವೆಂಡನ್ ಮೇಲಿತ್ತು. ಅದಕ್ಕೆ ಬೆಂಬಲ ಕೊಟ್ಟ ಆರೋಪ ಶಾಸಕರ ಮೇಲಿದೆ. ತಮ್ಮ ವ್ಯಾಪ್ತಿಯ ವಾರ್ಡ್'ನಲ್ಲಿ ಸಂಗ್ರಹವಾಗಿದ್ದ ತೆರಿಗೆ ಹಣವನ್ನು ಬಿಬಿಎಂಪಿ ಕೇಂದ್ರ ಕಚೇರಿಗೂ ಪಾವತಿಸದೇ ವಂಚನೆ ಮಾಡಲಾಗುತ್ತಿತ್ತು ಎಂದು ಹೇಳಲಾಗಿತ್ತು.
