ಜೈಪುರ[ಜು.14]: ರಾಜಸ್ಥಾನದಲ್ಲಿ ಜನರ ಗುಂಪು ಬಡಿದು ಹತ್ಯೆ ಮಾಡುವ ಘಟನೆ ಮರುಕಳಿಸಿದ್ದು, ಪೊಲೀಸ್‌ ಕಾನ್‌ಸ್ಟೇಬಲ್‌ವೊಬ್ಬರನ್ನು ಬಡಿದು ಹತ್ಯೆ ಮಾಡಲಾಗಿದೆ.

ಹೆಡ್‌ ಕಾನ್‌ಸ್ಟೇಬಲ್‌ ಅಬ್ದುಲ್‌ ಗನಿ ಎನ್ನುವವರು ಭೂ ವಿವಾದವೊಂದನ್ನು ತನಿಖೆ ನಡೆಸುತ್ತಿದ್ದರು. ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುವ ವೇಳೆ ಭೂ ಕಬಳಿಕೆಗೆ ಸಂಬಂಧಿಸಿದಂತೆ ವಾಗ್ವಾದ ಏರ್ಪಟ್ಟು ಜನರ ಗುಂಪು ಅಬ್ದುಲ್‌ ಮೇಲೆ ದೊಣ್ಣೆಯಿಂದ ಹಲ್ಲೆ ನಡೆಸಿದೆ. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.

ಪೊಲೀಸ್‌ ಇಲಾಖೆ ಸಾಹಸ: 1.30 ಕೋಟಿ ದಂಡ ವಸೂಲಿ

ಘಟನೆಯಿಂದ ಪೊಲೀಸ್‌ ಇಲಾಖೆ ಆಘಾತಕ್ಕೆ ಒಳಗಾಗಿದ್ದು, ಹಿರಿಯ ಅಧಿಕಾರಿಗಳು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.