ನಾಗನ ಸಹಚರರಾದ ಸರವಣ, ಪ್ರವೀಣ್ ಎಂಬುವವರು ಉಮೇಶ್, ಕಿಶೋರ್ ಎಂಬುವವರನ್ನು ಅಪಹರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬೆಂಗಳೂರು(ಏ.15): ರೌಡಿ ನಾಗನ ಮನೆಯ ಮೇಲೆ ದಾಳಿ ನಡೆಸಿದ ಪೊಲೀಸರು ಆತನ ವಿರುದ್ಧ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್'ಐಆರ್ ದಾಖಲಿಸಿದ್ದಾರೆ.
ನಾಗನ ಸಹಚರರಾದ ಸರವಣ, ಪ್ರವೀಣ್ ಎಂಬುವವರು ಉಮೇಶ್, ಕಿಶೋರ್ ಎಂಬುವವರನ್ನು ಅಪಹರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸರವಣ ಹಾಗೂ ಪ್ರವೀಣ್ ಎಂಬುವವರು ಮಾರ್ಚ್ 18 ಸಂಜೆ 4 ಗಂಟೆಗೆ KA 41- 9975 ನಂಬರಿನ ಕಾರಿನಲ್ಲಿ ಬಂದು ಮಾರಕಾಸ್ತ್ರಗಳನ್ನು ತೋರಿಸಿ ಬೆದರಿಸಿ 50 ಲಕ್ಷ ರೂ. ಹಣ, ಮೊಬೈಲ್ ಹಾಗೂ ಡೆಬಿಟ್ ಕಾರ್ಡ್'ಗಳನ್ನು ಕಸಿದುಕೊಂಡು ಪೊಲೀಸರಿಗೆ ತಿಳಿಸಿದರೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿರುವುದಾಗಿ ಎಫ್'ಐ'ಆರ್'ನಲ್ಲಿ ದಾಖಲಾಗಿದೆ.
ಬೆಂಗಳೂರಿನಲ್ಲಿರುವ ರೌಡಿಶೀಟರ್, ಮಾಜಿ ಪಾಲಿಕೆ ಸದಸ್ಯ ನಾಗರಾಜ ಅಲಿಯಾಸ್ ನಾಗನ ಮನೆ ಮೇಲೆ ಬೆಂಗಳೂರು ಪೂರ್ವ ವಿಭಾಗದ ಹೇಮಂತ್ ನಿಂಬಾಳ್ಕರ್ ನೇತೃತ್ವದ ತಂಡ ದಾಳಿ ನಡೆಸಿದ್ದು, ಮನೆಯ ಬೆಡ್‌ರೂಂನಲ್ಲಿ ಇಟ್ಟಿಗೆಯ ಮಂಚ ನಿರ್ಮಿಸಿ ಅದರಲ್ಲಿ ಅವಿತಿಟ್ಟಿದ್ದ . 14.80 ಕೋಟಿ ನಗದು ಹಾಗೂ ಮಾರಕಾಸ್ತ್ರಗಳನ್ನು ಜಪ್ತಿ ಮಾಡಿದೆ.
ಆದರೆ , ಖಾಕಿಯ ಪಡೆಯ ದಾಳಿಯ ಮುನ್ಸೂಚನೆಯ ಬಗ್ಗೆ ಮಾಹಿತಿ ಅರಿತಿದ್ದ ಆರೋಪಿ ನಾಗರಾಜ ರಾತ್ರೋರಾತ್ರಿ ಮನೆಯಿಂದ ಪರಾರಿ ಯಾಗಿದ್ದು, ಆತನ ಬಂಧನಕ್ಕೆ ವಿಶೇಷ ತಂಡ ರಚಿಸಲಾಗಿದೆ ಎಂದು ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ನಿಂಬಾಳ್ಕರ್ ಹೇಳಿದ್ದಾರೆ.
