ಬೆಂಗಳೂರು (ಫೆ.09): ನಗರದ ಹೊರವಲಯದಲ್ಲಿರುವ ರೌಡಿ ಶೀಟರ್ ಗಳ ಮೇಲೆ  ಕಣ್ಣಿಡಲು ಸಿಸಿಬಿ ಅಧಿಕಾರಿಗಳಿಗೆ ನಗರ ಪೊಲೀಸ್ ಆಯುಕ್ತ ಪ್ರವೀಣ್ ಸೂದ್ ಸೂಚನೆ ನೀಡಿದ್ದಾರೆ.

ಬೆಂಗಳೂರು (ಫೆ.09): ನಗರದ ಹೊರವಲಯದಲ್ಲಿರುವ ರೌಡಿ ಶೀಟರ್ ಗಳ ಮೇಲೆ ಕಣ್ಣಿಡಲು ಸಿಸಿಬಿ ಅಧಿಕಾರಿಗಳಿಗೆ ನಗರ ಪೊಲೀಸ್ ಆಯುಕ್ತ ಪ್ರವೀಣ್ ಸೂದ್ ಸೂಚನೆ ನೀಡಿದ್ದಾರೆ.

ಪೊಲೀಸರ ಮೇಲೆ ರೌಡಿಗಳು ದಾಳಿಗೆ ಸ್ಕೇಚ್ ಹಾಕಿದ್ದಾರೆ ಎಂದು ಹಿರಿಯ ಪೊಲೀಸ್ ಮೂಲಗಳ ತಿಳಿಸಿವೆ.

ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗಿರುವವರ ಮಾಹಿತಿ ಕಲೆ ಹಾಕಿ. ರಿಯಲ್ ಎಸ್ಟೇಟ್ ಮಾಫಿಯ ನಿಯಂತ್ರಿಸುತ್ತಿರುವ ರೌಡಿಗಳ ಪಟ್ಟಿ ಮಾಡಿ ಒಂದು ವಾರದಲ್ಲಿ ಲೀಸ್ಟ್ ಕೊಡುವಂತೆ ಪ್ರವೀಣ್ ಸೂದ್ ಸೂಚನೆ ನೀಡಿದ್ದಾರೆ.

ಸಿಸಿಬಿ ಅಧಿಕಾರಿಗಳಿಂದ ಕಾರ್ಯಾಚರಣೆ ಚುರುಕುಗೊಂಡಿದ್ದು ರೌಡಿಗಳ ಮಾಹಿತಿ ಕಲೆ ಹಾಕುತ್ತಿದ್ದಾರೆ. ಸದ್ಯ ಬೆಂಗಳೂರಿನಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ರೌಡಿ ಶೀಟರ್ ಗಳ ಪಟ್ಟಿ ಮಾಡಲಾಗಿದೆ.