ಬೆಂಗಳೂರಿನಲ್ಲಿ ರೌಡಿಗಳ ದಾಂಧಲೆ ಹೆಚ್ಚಿದ್ದು, ಕೊಲೆ ತಡೆಯಲು ಹೋದ ಸಬ್ ಇನ್ಸ್ಪೆಕ್ಟರ್ ಮೇಲೆಯೇ ಹಾಡಹಗಲೇ ಮಾರಾಕಾಸ್ತ್ರಗಳಿಂದ ಹಲ್ಲೆ ಮಾಡಿರುವ ಘಟನೆ ಡಿಜೆ ಹಳ್ಳಿಯ ಶಾಂಪುರ ಬಳಿ ನಡೆದಿದೆ.
ಬೆಂಗಳೂರು(ಆ.26): ಬೆಂಗಳೂರಿನಲ್ಲಿ ರೌಡಿಗಳ ದಾಂಧಲೆ ಹೆಚ್ಚಿದ್ದು, ಕೊಲೆ ತಡೆಯಲು ಹೋದ ಸಬ್ ಇನ್ಸ್ಪೆಕ್ಟರ್ ಮೇಲೆಯೇ ಹಾಡಹಗಲೇ ಮಾರಾಕಾಸ್ತ್ರಗಳಿಂದ ಹಲ್ಲೆ ಮಾಡಿರುವ ಘಟನೆ ಡಿಜೆ ಹಳ್ಳಿಯ ಶಾಂಪುರ ಬಳಿ ನಡೆದಿದೆ.
ರೌಡಿ ಶೀಟರ್ ನದೀಮ್ ಗ್ಯಾಂಗ್ ರೌಡಿ ಉಮರ್ ಕೊಲೆ ಮಾಡಲು ಅಟ್ಟಾಡಿಸಿಕೊಂಡು ಹೋಗಿತ್ತು. ಈ ದೃಶ್ಯ ಕಂಡು ಕೊಲೆ ತಡೆಯಲು ಹೋದ ಡಿಜೆ ಹಳ್ಳಿ ಸಬ್ ಇನ್ಸ್ಪೆಕ್ಟರ್ ನಯಾಜ್ ಅಹಮದ್ ಮೇಲೆ ನದೀಮ್ ಗ್ಯಾಂಗ್ ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.
ಸಬ್ ಇನ್ಸ್ಪೆಕ್ಟರ್ ನಯಾಜ್ ಅಹಮದ್'ಗೆ ತಲೆಗೆ ಗಂಭೀರ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರೌಡಿ ಶೀಟರ್ ನದೀಮ್ ಗ್ಯಾಂಗ್ಗೆ ಪೊಲೀಸರು ಬಲೆ ಬೀಸಿದ್ದಾರೆ.
