ಥಳಿತಕ್ಕೊಳಗಾದ ಮೂವರು  ತೀವ್ರ ಸ್ವರೂಪದ ಗಾಯಗಳಾಗಿದ್ದು ಓಡಾಡುವುದಕ್ಕೆ ಸಾಧ್ಯವಾಗುತ್ತಿಲ್ಲ. ಸ್ಟ್ರಚ್ಚರ್,ವ್ಹೀಲ್ ಚೇರ್ ಗಳಲ್ಲಿ ಎತ್ತಿಕೊಂಡು ಹೋಗುವ ಸ್ಥಿತಿ ಬಂದಿದ್ದು ಪೊಲೀಸರು ಈ ಕ್ರಮಕ್ಕೆ ಸಂಬಂಧಿಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

ದಾವಣಗೆರೆ (ನ.27): ತೋಟದ ಮಾಲೀಕರ ಮನೆಯಲ್ಲಿ ಕಳ್ಳತನ ಮಾಡಿದ್ದಾರೆಂಬ ಆರೋಪದ ಮೇಲೆ ಹದಡಿ ಪೊಲೀಸರು ಮೂವರನ್ನು ಅಮಾನವೀಯವಾಗಿ ಥಳಿಸಿದ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ನಡೆದಿದೆ.

ಗೋಪನಾಳ್ ಗ್ರಾಮದ ದೇವೇಂದ್ರಪ್ಪ ಎಂಬುವರ ತೋಟಕ್ಕೆ ಗೋಪನಾಳ್ ಗ್ರಾಮದ ಇಮ್ರಾನ್, ಪಯಾಜ್, ಹಾಗೂ ಅಲ್ಲಾಭಕ್ಷ್ ಎಂಬುವರು ಕೆಲಸಕ್ಕೆ ಹೋಗಿದ್ದರು.

ಅವರ ಮನೆಯಲ್ಲಿ ಒಂದು ವಾರದ ಹಿಂದೆ ಅಡಿಕೆ ಕಳ್ಳತನವಾಗಿತ್ತು. ಈ ಬಗ್ಗೆ ದೇವೆಂದ್ರಪ್ಪ ಹದಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಕೆಲಸಕ್ಕೆ ಬಂದ ಈ ಮೂವರ ಮೇಲೆ ಪ್ರಕರಣ ದಾಖಲಾದ ಹಿನ್ನಲೆಯಲ್ಲಿ ಹದಡಿ ಪೊಲೀಸರು ಮೂವರನ್ನು ಕರೆದುಕೊಂಡು ನಿನ್ನೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಥಳಿತಕ್ಕೊಳಗಾದ ಮೂವರು ತೀವ್ರ ಸ್ವರೂಪದ ಗಾಯಗಳಾಗಿದ್ದು ಓಡಾಡುವುದಕ್ಕೆ ಸಾಧ್ಯವಾಗುತ್ತಿಲ್ಲ. ಸ್ಟ್ರಚ್ಚರ್,ವ್ಹೀಲ್ ಚೇರ್ ಗಳಲ್ಲಿ ಎತ್ತಿಕೊಂಡು ಹೋಗುವ ಸ್ಥಿತಿ ಬಂದಿದ್ದು ಪೊಲೀಸರು ಈ ಕ್ರಮಕ್ಕೆ ಸಂಬಂಧಿಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

ಕಳ್ಳತನ ಮಾಡಿದ್ದರೇ ಬಂಧಿಸಿ ಏನಾದ್ರು ಶಿಕ್ಷೆ ಕೊಡಲಿ ಆದರೆ ಈ ರೀತಿ ಅಮಾನವೀಯ ದೌರ್ಜನ್ಯ ವೆಸಗಿದರೆ ಈ ಕೂಲಿ ಕಾರ್ಮಿಕರ ಪಾಡೇನು ಎಂದು ಆಕ್ರೋಶವ್ಯಕ್ತಪಡಿಸಿದ್ದಾರೆ.

ಇಬ್ಬರಿಗು ಎರಡು ಕಿವಿ ಕೇಳದಂತಾಗಿದ್ದು ಇದಕ್ಕೆ ಚಿಕಿತ್ಸೆ ಕೊಡಿಸುವವರು ಯಾರು ಎಂದು ಪ್ರಶ್ನಿಸಿದ್ದಾರೆ.