1.37 ಕೋಟಿ ಹಣವಿದ್ದ ವಾಹನದೊಂದಿಗೆ ನಾಪತ್ತೆಯಾಗಿದ್ದ ಚಾಲಾಕಿ ಚಾಲಕನ ಪತ್ತೆಯಾಗಿದ್ದು, ಪೊಲೀಸರು ಆರೋಪಿ ಡೊಮಿನಿಕ್'ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೆ.ಆರ್.ಪುರಂನ ಟಿನ್ ಫ್ಯಾಕ್ಟರಿ ಬಳಿ ಈ ಪ್ರಕರಣದ ಆರೋಪಿ ಚಾಲಾಕಿ ಚಾಲಕ ಡೊಮಿನಿಕ್'ನನ್ನು ಉಪ್ಪಾರಪೇಟೆ ಪೊಲೀಸರು ಬಂಧಿಸಿದ್ದು, ಪೊಲೀಸ್ ಆಯುಕ್ತ ಚರಣ್ ರೆಡ್ಡಿ ಈ ಕುರಿತಾಗಿ ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರು(ನ.29): 1.37 ಕೋಟಿ ಹಣವಿದ್ದ ವಾಹನದೊಂದಿಗೆ ನಾಪತ್ತೆಯಾಗಿದ್ದ ಚಾಲಾಕಿ ಚಾಲಕನ ಪತ್ತೆಯಾಗಿದ್ದು, ಪೊಲೀಸರು ಆರೋಪಿ ಡೊಮಿನಿಕ್'ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೆ.ಆರ್.ಪುರಂನ ಟಿನ್ ಫ್ಯಾಕ್ಟರಿ ಬಳಿ ಈ ಪ್ರಕರಣದ ಆರೋಪಿ ಚಾಲಾಕಿ ಚಾಲಕ ಡೊಮಿನಿಕ್'ನನ್ನು ಉಪ್ಪಾರಪೇಟೆ ಪೊಲೀಸರು ಬಂಧಿಸಿದ್ದು, ಪೊಲೀಸ್ ಆಯುಕ್ತ ಚರಣ್ ರೆಡ್ಡಿ ಈ ಕುರಿತಾಗಿ ಸ್ಪಷ್ಟನೆ ನೀಡಿದ್ದಾರೆ.
ಡೊಮಿನಿಕ್'ನನ್ನು ಪತ್ತೆ ಹಚ್ಚಲು ಪೊಲೀಸರ ನಾಲ್ಕು ತಂಡಗಳು ಕಾರ್ಯಾಚರಣೆಗಿಳಿದಿದ್ದರು. ಈ ಸಂಬಂಧ ಆರೋಪಿಯ ಪತ್ನಿ ಎಲ್ವಿನ್'ಳನ್ನೂ ನಿನ್ನೆ ಬಂಧಿಸಲಾಗಿತ್ತು. ನವೆಂಬರ್ 23ರಂದು ATM ಹಣ ಸಾಗಿಸುವ ವಾಹನದ ಚಾಲಕ ಡೊಮಿನಿಕ್1.37 ಕೋಟಿ ಹಣದೊಂದಿಗೆ ಪರಾರಿಯಾಗಿದ್ದ.
ಮರುದಿನ ಗಾಡಿಯಲ್ಲಿ ಕೇವಲ 40 ಲಕ್ಷ ಉಳಿಸಿ ಇದನ್ನು ವಸಂತನಗರದ ಮೌಂಟ್ ಕಾರ್ಮೆಲ್ ಕಾಲೇಜು ಬಳಿ ಬಿಟ್ಟು ಉಳಿದ 92 ಲಕ್ಷದೊಂದಿಗೆ ಪರಾರಿಯಾಗಿದ್ದ. ಪತ್ನಿ ಎಲ್ವಿನ್'ಳಿಂದ ಈಗಾಗಲೇ 79.8 ಲಕ್ಷ ಹಣವನ್ನು ವಶಪಡಿಸಿಕೊಂಡಿದ್ದು, 8 ಲಕ್ಷವನ್ನು ತಾವು ಪಡೆದಿದ್ದ ಸಾಲ ತೀರಿಸಲು ಉಪಯೋಗಿಸಿದ್ದೇವೆ ಎಂದಿದ್ದಾರೆ.
ಸದ್ಯ ಈ ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ಪೊಲೀಸರು ಉಳಿದ 14 ಲಕ್ಷ ಹಣ ಪತ್ತೆಗಾಗಿ ತನಿಖೆ ಮುಂದುವರೆಸಿದ್ದಾರೆ.
