ಹೊಸ ವರ್ಷದಂದು ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಕಾಗವಾಡ ಗ್ರಾಮದಲ್ಲಿ  ಬಿಜೆಪಿ ಶಾಸಕ ರಾಜು ಕಾಗೆ ಬೆಂಬಲಿಗರು, ವಿವೇಕ್ ಶೆಟ್ಟಿ ಮೇಲೆ ಗೂಂಡಾಗಿರಿ ನಡೆಸಿದ್ರು. ಈ ಹಿನ್ನೆಲೆ ಜ.9ರಂದು FIR ದಾಖಲಾಗುತ್ತಿದ್ದಂತೆ, ಶಾಸಕ ರಾಜು ಸೇರಿ 13 ಜನ ಆರೋಪಿಗಳು ಪರಾರಿಯಾಗಿದ್ದರು. ಕಾಗವಾಡ ಪೊಲೀಸರು ಗೂಂಡಾಗಿರಿ ನಡೆಸಿದ್ದ ಆರೋಪಿಗಳ ಪತ್ತೆಗೆ ತನಿಖೆ ನಡೆಸುತ್ತಿದ್ದರು. ವಿಪರ್ಯಾಸ ಎಂದರೆ ಹೊಡೆದವರನ್ನು ಬಿಟ್ಟು, ನೋಡಿದವರನ್ನು ಆರೋಪಿಗಳು ಎಂದು ವಶಕ್ಕೆ ಪಡೆದ ಪೊಲೀಸರು ರವೀಂದ್ರ , ಮಲಗೊಂಡ ಪಾಟೀಲ್​, ಶಂಕರ್​, ನಾಂದಣಿ​​ರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

ಬೆಳಗಾವಿ(ಜ.15): ಜನವರಿ 1 ರಂದು ವಿವೇಕ್​ ಶೆಟ್ಟಿ ಮೇಲೆ ಹಲ್ಲೆ ನಡೆಸಿದ್ದ ರಾಜು ಕಾಗೆ ಬೆಂಬಲಿಗರಿಗೆ, ಪರಾರಿಯಾಗಲು ಸಹಾಯ ಮಾಡಿದ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಹೊಸ ವರ್ಷದಂದು ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಕಾಗವಾಡ ಗ್ರಾಮದಲ್ಲಿ ಬಿಜೆಪಿ ಶಾಸಕ ರಾಜು ಕಾಗೆ ಬೆಂಬಲಿಗರು, ವಿವೇಕ್ ಶೆಟ್ಟಿ ಮೇಲೆ ಗೂಂಡಾಗಿರಿ ನಡೆಸಿದ್ರು. ಈ ಹಿನ್ನೆಲೆ ಜ.9ರಂದು FIR ದಾಖಲಾಗುತ್ತಿದ್ದಂತೆ, ಶಾಸಕ ರಾಜು ಸೇರಿ 13 ಜನ ಆರೋಪಿಗಳು ಪರಾರಿಯಾಗಿದ್ದರು. ಕಾಗವಾಡ ಪೊಲೀಸರು ಗೂಂಡಾಗಿರಿ ನಡೆಸಿದ್ದ ಆರೋಪಿಗಳ ಪತ್ತೆಗೆ ತನಿಖೆ ನಡೆಸುತ್ತಿದ್ದರು. ವಿಪರ್ಯಾಸ ಎಂದರೆ ಹೊಡೆದವರನ್ನು ಬಿಟ್ಟು, ನೋಡಿದವರನ್ನು ಆರೋಪಿಗಳು ಎಂದು ವಶಕ್ಕೆ ಪಡೆದ ಪೊಲೀಸರು ರವೀಂದ್ರ , ಮಲಗೊಂಡ ಪಾಟೀಲ್​, ಶಂಕರ್​, ನಾಂದಣಿ​​ರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

ಇವರೆಲ್ಲಾ ರಾಜು ಕಾಗೆ ಸ್ನೇಹಿತರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ ನಿಜವಾದ ಆರೋಪಿಗಳನ್ನು ಹಿಡಿಯುವ ಬದಲು, ಆರೋಪಿಗಳ ಪರಾರಿಗೆ ಸಹಾಯ ಮಾಡಿದ್ದರೆಂದು ಯಾರನ್ನೋ ಹಿಡಿದು, ಪ್ರಕರಣದ ದಾರಿಯನ್ನೇ ಬದಲಾಯಿಸುವ ಪ್ರಯತ್ನ ಇಲ್ಲಿ ನಡೆಯುತ್ತಿರಬಹುದೆಂಬ ಅನುಮಾನ ಕೂಡ ವ್ಯಕ್ತವಾಗುತ್ತಿದೆ.