ಮತ್ತೊಂದು ಹನಿಟ್ರ್ಯಾಪ್ ಗ್ಯಾಂಗ್ ಅರೆಸ್ಟ್: ಇವರ ಬುದ್ಧಿವಂತಿಕೆಗೆ ಮಾರುಹೋಗುತ್ತಿದ್ದ ಗಿರಾಕಿಗಳು

First Published 19, Jan 2018, 10:05 AM IST
Police arrest honeytrap gang
Highlights

ಸುಂದರವಾದ ಚಿಕ್ಕ ವಯಸ್ಸಿನ ಹುಡುಗಿ ಇದ್ದಾಳೆ ಎಂದು ಹೇಳಿ ಮನೆಗೆ ಕರೆಸಿಕೊಳ್ಳುತ್ತಿದ್ದರು.

ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಮತ್ತೊಂದು ಹನಿಟ್ರ್ಯಾಪ್ ಗ್ಯಾಂಗ್ ಅಂದರ್ ಆಗಿದೆ. ಕೊತ್ತನೂರು ಪೊಲೀಸರು ಹನಿಟ್ರ್ಯಾಪ್ ದಂಧೆ ನಡೆಸುತ್ತಿದ್ದ ಐವರನ್ನು ಬಂಧಿಸಿದ್ದಾರೆ.  ಶಾಯಿನ್, ಸಜೀದ್, ಶಬ್ಬರ್ ಶರೀಫ್, ನೂರಿ, ಸಲ್ಮಾ ಬಂಧಿತರು.. ಹೆಗ್ಡೆ ನಗರದ ಮನೆಯೊಂದರಲ್ಲಿ ಹನಿಟ್ರ್ಯಾಪ್ ದಂಧೆ ನಡೆಸುತ್ತಿದ್ದು, ಬಂಧಿತರಾದ ಶಾಯಿನ್ ಹಾಗೂ ನೂರಿ ಗಿರಾಕಿಗಳಿಗೆ ಗಾಳ ಹಾಕುತ್ತಿದ್ದರು.

ಸುಂದರವಾದ ಚಿಕ್ಕ ವಯಸ್ಸಿನ ಹುಡುಗಿ ಇದ್ದಾಳೆ ಎಂದು ಹೇಳಿ ಮನೆಗೆ ಕರೆಸಿಕೊಳ್ಳುತ್ತಿದ್ದರು. ಬಳಿಕೆ ಯುವತಿ ಜೊತೆ ಗಿರಾಕಿಗಳು ಕೊಠಡಿಗೆ ತೆರಳುತ್ತಿದ್ದಂತೆ  ಇಬ್ಬರು ಕ್ಯಾಮರಾ ತೆಗೆದುಕೊಂಡು ವಿಡಿಯೋ ಮಾಡಿ ಪೊಲೀಸರಿಗೆ ದೂರು ಕೊಡುವುದರ ಜೊತೆ ಇಂಟರ್ನೆಟ್, ವಾಟ್ಸಪ್'ನಲ್ಲಿ ಅಪ್ಲೋಡ್ ಮಾಡುತ್ತೇನೆ ಎಂದು ಬೆದರಿಸಿ ಲಕ್ಷಾಂತರ ಹಣವನ್ನು ಪೀಕುತ್ತಿದ್ದರು.

ಇದೇ ರೀತಿ ಡಿಜೆ ಹಳ್ಳಿ ನಿವಾಸಿ ಸೈಯಾದ್ ರೆಹಮತ್ ಎಂಬುವರಿಗೆ ಕರೆ ಮಾಡಿ ಹುಡುಗಿ ಇದ್ದಾಳೆ ಬನ್ನಿ ಎಂದು ಹೇಳಿದ್ದರು. ಶಾಯಿನ್ ಮನೆಗೆ ಸೈಯದ್ ರೆಹಮತ್ ಸಲ್ಮಾ ಎಂಬ ಯುವತಿಯ ಜೊತೆ ಇದ್ದಾಗ ರೂಮ್'ಗೆ ನುಗ್ಗಿ ನನ್ನ ಹೆಂಡತಿ ಜೊತೆ ಮಲಗಿದ್ದೀಯಾ ಎಂದು ಬೆದರಿಸಿ 50 ಸಾವಿರಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಸೈಯದ್ ರೆಹಮತ್ ಕೊತ್ತನೂರು ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದರು. ಕಾರ್ಯಾಚರಣೆ ನಡೆಸಿದ ಎಲ್ಲಾ ಆರೋಪಿಗಳನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

loader