ಯಾದಗಿರಿ ಮೂಲದ ಮಲ್ಲಿ ಅರ್ಜುನ್ ಬಂಧಿತ ಆರೋಪಿ. ಕೆಲಸಕ್ಕಾಗಿ ಬೆಂಗಳೂರಿಗೆ ಬಂದಿದ್ದ ಈತನನ್ನು ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು(ಸೆ.07): ಗೌರಿ ಲಂಕೇಶ್ ಹತ್ಯೆಯಾದ ನಂತರ ಅವರ ಸಾವಿನ ಬಗ್ಗೆ ಫೇಸ್'ಬುಕ್'ನಲ್ಲಿ ವಿವಾದಾತ್ಮಕವಾಗಿ ಪೋಸ್ಟ್ ಮಾಡಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಯಾದಗಿರಿ ಮೂಲದ ಮಲ್ಲಿ ಅರ್ಜುನ್ ಬಂಧಿತ ಆರೋಪಿ. ಕೆಲಸಕ್ಕಾಗಿ ಬೆಂಗಳೂರಿಗೆ ಬಂದಿದ್ದ ಈತನನ್ನು ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದ ಪೊಲೀಸರು ಹೆಚ್ಚಿನ ವಿಚಾರಣೆಗಾಗಿ ಒಂದು ವಾರ ಕಾಲ ಪೊಲೀಸ್ ವಿಚಾರಣೆಗಾಗಿ ಒಪ್ಪಿಸಲಾಗಿದೆ. ಗೌರಿ ಲಂಕೇಶ್ ಹತ್ಯೆಯಾದ ನಂತರ ‘ಒಂದು ಗಂಜಿ ಗಿರಾಕಿಯ ಹೆಣ ಬಿತ್ತು’ ‘ಮಿಕ್ಕ ಗಂಜಿ ಗಿರಾಕಿಗಳಿಗೂ ಇದೇ ಗತಿ’ ‘ಗೌರಿ ಲಂಕೇಶ್ ಮಟ್ಯಾಷ್’ ಎಂದು ಫೇಸ್'ಬುಕ್'ನಲ್ಲಿ ಸ್ಟೇಟಸ್ ಹಾಕಿದ್ದ.
