ಸರ್ಕಾರ ನೋಟು ಅಮಾನ್ಯ ಕ್ರಮವನ್ನು ಕೈಗೊಂಡ ಬಳಿಕ, ಆದಾಯ ತೆರಿಗೆ ಇಲಾಖೆಯು ದೇಶದಾದ್ಯಂತ 760 ಕಡೆ ದಾಳಿ ನಡೆಸಿದೆ.
ದಾವಣಗೆರೆ (ಡಿ.26): ಸಮರ್ಪಕ ಲೆಕ್ಕಪತ್ರವಿಲ್ಲದೇ ರೂ.11.30 ಲಕ್ಷ ಮೌಲ್ಯದ ಹೊಸ ರೂ.2000 ಮುಖಬೆಲೆಯ ನೋಟುಗಳನ್ನು ಕೊಂಡೊಯ್ಯುತ್ತಿದ್ದ ಇಬ್ಬರನ್ನು ದಾವಣಗೆರೆ ಪೊಲೀಸರು ಬಂಧಿಸಿದ್ದಾರೆ.
ಬಳಿಕ ಪ್ರಕರಣವನ್ನು ಪೊಲೀಸರು ಆದಾಯ ತೆರಿಗೆ ಇಲಾಖೆಗೆ ವರ್ಗಾಯಿಸಿದ್ದಾರೆ.
ಸರ್ಕಾರ ನೋಟು ಅಮಾನ್ಯ ಕ್ರಮವನ್ನು ಕೈಗೊಂಡ ಬಳಿಕ, ಆದಾಯ ತೆರಿಗೆ ಇಲಾಖೆಯು ದೇಶದಾದ್ಯಂತ 760 ಕಡೆ ದಾಳಿ ನಡೆಸಿದೆ.
ಅದು ವಶಪಡಿಸಿಕೊಂಡಿರುವ ರೂ.505 ಕೋಟಿಯ ಪೈಕಿ, 93 ಕೋಟಿ ರೂ. ಸರ್ಕಾರವು ಬಿಡುಗಡೆ ಮಾಡಿರುವ ಹೊಸ ಮುಖಬೆಲೆಯ ನೋಟುಗಳಾಗಿವೆ.