ಪ್ರಗತಿಪರ ಚಿಂತಕಿ, ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆ ನಡೆದ ಕೆಲವೇ ಕ್ಷಣದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಅವರ ಹತ್ಯೆಯ ವಿಚಾರವನ್ನು ವಿನಿಮಯ ಮಾಡಿಕೊಂಡವರ ಪತ್ತೆಗೆ ಎಸ್‌ಐಟಿ ಮುಂದಾಗಿದೆ.
ಬೆಂಗಳೂರು(ಸೆ.18): ಪ್ರಗತಿಪರ ಚಿಂತಕಿ, ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆ ನಡೆದ ಕೆಲವೇ ಕ್ಷಣದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಅವರ ಹತ್ಯೆಯ ವಿಚಾರವನ್ನು ವಿನಿಮಯ ಮಾಡಿಕೊಂಡವರ ಪತ್ತೆಗೆ ಎಸ್ಐಟಿ ಮುಂದಾಗಿದೆ.
ಗೌರಿ ಅವರನ್ನು ಹಂತಕರು ಹತ್ಯೆ ಮಾಡಿದ ವಿಷಯ ಪೊಲೀಸರಿಗೆ ತಿಳಿಯುವ ಮುನ್ನವೇ ಸಾಮಾಜಿಕ ಜಾಲತಾಣ ೇಸ್ಬುಕ್ ಮತ್ತು ಟ್ವೀಟರ್ನಲ್ಲಿ ಹತ್ಯೆಯ ವಿಚಾರ ಹರಿದಾಡಿತ್ತು. ಅದುವೇ ಹತ್ಯೆ ನಡೆದ ಐದಾರು ನಿಮಿಷದಲ್ಲೇ ಈ ವಿಚಾರ ವಿನಿಮಯ ಆಗಿದೆ. ಹೀಗಾಗಿ ಫೇಸ್ ಬುಕ್ ಮತ್ತು ಟ್ವೀಟರ್ನಲ್ಲಿ ಈ ವಿಚಾರ ಹಾಕಿದವರನ್ನು ಪತ್ತೆ ಹಚ್ಚಲು ಸಿಐಡಿ ಸೈಬರ್ ಕ್ರೈಂ ಪೊಲೀಸರಿಗೆ ಹೊಣೆ ವಹಿಸಲಾಗಿದೆ. ಗೌರಿ ಲಂಕೇಶ್ ಅವರ ಹತ್ಯೆಯ ಬಗ್ಗೆ ಸ್ಟೇಟಸ್ ಹಾಕಿದವರು ಪತ್ತೆಯಾದ ಬಳಿಕ ಎಸ್ಐಟಿ ತಂಡ ಅವರನ್ನು ವಿಚಾರಣೆ ನಡೆಸಲಿದೆ ಎಂದು ಮೂಲಗಳು ತಿಳಿಸಿವೆ.
