ಮಕ್ಕಳನ್ನು ಕಿಡ್ನಾಪ್ ಮಾಡಿ ಭಿಕ್ಷಾಟನೆ ಬಳಕೆ ಮಾಡುತ್ತಿದ್ದ ಭಯಾನಕ ಗ್ಯಾಂಗ್'ನ್ನು ಪತ್ತೆ ಹಚ್ಚಿದ್ದ ಸುವರ್ಣ ನ್ಯೂಸ್'ನ ಕವರ್ ಸ್ಟೋರಿ ತಂಡ ರಹಸಯ ಕಾರ್ಯಾಚರಣೆಯ ಮೂಲಕ ಇವರ ಬಣ್ಣ ಬಯಲು ಮಾಡಿತ್ತು. ಕವರ್ ಸ್ಟೋರಿ ಕಾರ್ಯಾಚರಣೆಯಿಂದ ಎಚ್ಚೆತ್ತ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಬೆಂಗಳೂರಿನ ಹಲವೆಡೆ ಬಿಕ್ಷುಕರ ಮೇಲೆ ದಾಳಿ ನಡೆಸಿ 100 ಕ್ಕೂ ಹೆಚ್ಚು ಬಿಕ್ಷುಕರನ್ನು ಬಂಧಿಸಿದ್ದಾರೆ.
ಬೆಂಗಳೂರು(ಜೂ.10): ಮಕ್ಕಳನ್ನು ಕಿಡ್ನಾಪ್ ಮಾಡಿ ಭಿಕ್ಷಾಟನೆ ಬಳಕೆ ಮಾಡುತ್ತಿದ್ದ ಭಯಾನಕ ಗ್ಯಾಂಗ್'ನ್ನು ಪತ್ತೆ ಹಚ್ಚಿದ್ದ ಸುವರ್ಣ ನ್ಯೂಸ್'ನ ಕವರ್ ಸ್ಟೋರಿ ತಂಡ ರಹಸಯ ಕಾರ್ಯಾಚರಣೆಯ ಮೂಲಕ ಇವರ ಬಣ್ಣ ಬಯಲು ಮಾಡಿತ್ತು. ಕವರ್ ಸ್ಟೋರಿ ಕಾರ್ಯಾಚರಣೆಯಿಂದ ಎಚ್ಚೆತ್ತ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಬೆಂಗಳೂರಿನ ಹಲವೆಡೆ ಬಿಕ್ಷುಕರ ಮೇಲೆ ದಾಳಿ ನಡೆಸಿ 100 ಕ್ಕೂ ಹೆಚ್ಚು ಬಿಕ್ಷುಕರನ್ನು ಬಂಧಿಸಿದ್ದಾರೆ.
ಕೇಂದ್ರ ಪರಿಹಾರ ಸಮಿತಿ ಕಾರ್ಯದರ್ಶಿ ಚಂದ್ರಾ ನಾಯಕ್ ನೇತೃತ್ವದಲ್ಲಿ ಮೆಜೆಸ್ಟಿಕ್ ಸುತ್ತಮುತ್ತ ಭಿಕ್ಷುಕರ ನಡೆದ ಈ ದಾಳಿಯಲ್ಲಿ 150ಕ್ಕೂ ಹೆಚ್ಚು ಬಿಕ್ಷುಕರನ್ನು ಬಂಧಿಸಲಾಗಿದೆ. ಈ ವೇಳೆ ಮಕ್ಕಳನ್ನು ಭಿಕ್ಷಾಟನೆಗೆ ತಳ್ಳತ್ತಿದ್ದ ಈ ಮಾಫಿಯಾದ ಕಿಂಗ್ಪಿನ್ ಕೂಡಾ ಅರೆಸ್ಟ್ ಆಗಿರುವ ಮಾಹಿತಿ ಲಭ್ಯವಾಗಿದೆ. ಅಲ್ಲದೇ ರಾಜಸ್ತಾನ, ಬಿಹಾರ, ಮಧ್ಯಪ್ರದೇಶ ಮೂಲದ ಗ್ಯಾಂಗ್'ಗಳೂ ಜೈಲು ಪಾಲಾಗಿವೆ. ಇದು ಕವರ್ ಸ್ಟೋರಿ ತಂಡದ ಬಿಗ್ ಇಂಪ್ಯಾಕ್ಟ್.
