Asianet Suvarna News Asianet Suvarna News

ರೈತನೊಬ್ಬ ಕೋತಿ ಕೈಲಿದ್ದ 3 ಲಕ್ಷ ಹಣ ಕಿತ್ತುಕೊಂಡು ಠಾಣೆಗೆ ಒಪ್ಪಿಸಿದಾಗ... ಪೊಲೀಸಪ್ಪ ಮಾಡಿದ್ದೇನು?

ಕೋತಿ ಹಿಡಿದಿದ್ದ ಪ್ಲಾಸ್ಟಿಕ್‌ ಕವರ್‌'ನಲ್ಲಿ ರೂ.3 ಲಕ್ಷ ಇರುವುದನ್ನು ತಿಳಿದ ರೈತರೊಬ್ಬ ಅದನ್ನು ಪೊಲೀಸ್‌ ಠಾಣೆಗೆ ತಿಳಿಸಿ ಪ್ರಾಮಾಣಿಕತೆ ಮೆರೆದಿ​ದ್ದಾರೆ. ಆದರೆ, ಆ ಹಣ ತನ್ನದೇ ಎಂದು ಹೇಳಿ ಆ ಠಾಣೆಯ ಎಎಸ್ಸೈವೊಬ್ಬರು ಹಣ ಪಡೆದು, ಕಾರು ಖರೀದಿಸಿದ್ದಾರೆ.

police allegedly misuses money given by farmer who claimed to have grabbed from monkey

ವರದಿ: ಅಶ್ವತ್‌ ನಾರಾ​ಯ​ಣ, ಕನ್ನಡಪ್ರಭ

ಚಿಕ್ಕಬಳ್ಳಾಪುರ: ಇದು ಒಂದು ರೀತಿ​ಯಲ್ಲಿ ಕೊಟ್ಟ​ವನು ಕೋಡಂಗಿ ಇಸ್ಕೊಂಡ​ವನು ಈರ​ಭದ್ರ ಎನ್ನುವ ಕತೆಯನ್ನು ನೆನ​ಪಿ​ಸುವ ಪ್ರಸಂಗ! ಆದರೆ, ಈ ಪ್ರಸಂಗ​ದ​ಲ್ಲಿ ಇಸ್ಕೊಂಡ​ವರು ಪೊಲೀ​ಸ​ರು. ಇಡೀ ಪ್ರಕ​ರ​ಣ​ವನ್ನು ನಿಭಾ​ಯಿ​ಸಿದ ರೀತಿ ನೋಡಿ​ದಾಗ ಕೊಟ್ಟ​ವರಿಗೆ ಮಾತ್ರ ಎಲ್ಲೋ ಈಗ ತಾನು ಈ ಪ್ರಸಂಗ​ದಲ್ಲಿ ಕೋಡಂಗಿ​ಯಾ​ದೆನಾ ಎನ್ನುವ ಅನು​ಮಾನ ಹುಟ್ಟು​ವಂತೆ ಮಾಡಿ​ದೆ.

ಕೋತಿ ಹಿಡಿದಿದ್ದ ಪ್ಲಾಸ್ಟಿಕ್‌ ಕವರ್‌'ನಲ್ಲಿ ರೂ.3 ಲಕ್ಷ ಇರುವುದನ್ನು ತಿಳಿದ ರೈತರೊಬ್ಬ ಅದನ್ನು ಪೊಲೀಸ್‌ ಠಾಣೆಗೆ ತಿಳಿಸಿ ಪ್ರಾಮಾಣಿಕತೆ ಮೆರೆದಿ​ದ್ದಾರೆ. ಆದರೆ, ಆ ಹಣ ತನ್ನದೇ ಎಂದು ಹೇಳಿ ಆ ಠಾಣೆಯ ಎಎಸ್ಸೈವೊಬ್ಬರು ಹಣ ಪಡೆದು, ಕಾರು ಖರೀದಿಸಿದ್ದಾರೆ. ನಿಜವಾಗಲೂ ಹಣ ಆ ಎಎಸ್ಸೈಗೆ ಸೇರಿದ್ದೇ? ಹೌದೇ ಆದರೆ ಆ ಹಣ ಕೋತಿ ಕೈಗೆ ಹೇಗೆ ಬಂತು ಎನ್ನುವ ಅನು​ಮಾನ ಪ್ರಶ್ನೆಗೆ ಇನ್ನೂ ಸಮರ್ಪಕ ಉತ್ತರ ಸಿಕ್ಕಿ​ಲ್ಲ.

ಆಗಿ​ದ್ದೇ​ನು?: ಚಿಂತಾಮಣಿ ತಾಲೂಕಿನ ಬಂಡಕೋಟೆ ಗ್ರಾಮದ ಶ್ರೀರಾಮರೆಡ್ಡಿ ಎಂಬ ರೈತ, ಪ್ರಕರಣವೊಂದರ ಮಾಹಿತಿ ಪಡೆ​ಯಲು ಪರಿ​ಚಿ​ತ​ ಹುಡು​ಗ​ನೊಂದಿ​ಗೆ ಕೆಂಚಾರ್ಲಹಳ್ಳಿ ಪೊಲೀಸ್‌ ಠಾಣೆಗೆ ನ.10ರಂದು ತೆರಳಿದ್ದಾರೆ. ಠಾಣೆಗೆ ಹೋಗುವ ಮುನ್ನ ಪಟ್ಟಣದಲ್ಲಿ ಮನೆಗೆಂದು ತರಕಾರಿ ಖರೀದಿಸಿ ಅವನ್ನು ಕಪ್ಪು ಪ್ಲಾಸ್ಟಿಕ್‌ ಕವರ್‌'ನಲ್ಲಿ ಹಾಕಿಕೊಂಡು ಠಾಣೆ ಬಳಿ ಬಂದಿದ್ದಾರೆ. ಠಾಣೆ ಒಳಕ್ಕೆ ಈ ಕಪ್ಪು ಪ್ಲಾಸ್ಟಿಕ್‌ ತೆಗೆ​ದು​ಕೊಂಡು ಹೋಗು​ವುದು ಸರಿ​ಯಲ್ಲ ಎಂದು ತೀರ್ಮಾ​ನಿ​ಸಿ ಅದನ್ನು ಠಾಣೆ ಎದುರಿಗಿದ್ದ ಬೈಕ್‌ವೊಂದರ ಮೇಲೆ ಇಟ್ಟು ಒಳಹೋಗಿದ್ದಾರೆ. ಸಬ್‌ಇನ್ಸ್‌ಪೆಕ್ಟರ್‌ ಇಲ್ಲ ಎಂದು ಎಎಸ್ಸೈ ತಿಳಿಸಿದ್ದರಿಂದ ಠಾಣೆ​ಯಿಂದ ಹೊರ​ಬಂದಿ​ದ್ದಾರೆ. ಅಷ್ಟರಲ್ಲೇ ಕೋತಿಯೊಂದು ಠಾಣೆ ಆವರಣದಲ್ಲಿ ಕಪ್ಪು ಪ್ಲಾಸ್ಟಿಕ್‌ ಕವರ್‌ ಹಿಡಿದಿರುವುದು ಶ್ರೀರಾಮರೆಡ್ಡಿ ಕಣ್ಣಿಗೆ ಬಿತ್ತು. ಅದು ತಮ್ಮದೇ ತರಕಾರಿ ಚೀಲ ಎಂದು ಭಾವಿಸಿದ ರೆಡ್ಡಿ ಹರಸಾಹಸಪಟ್ಟು ಕೋತಿಯಿಂದ ಆ ಚೀಲ ಬಿಡಿಸಿಕೊಂಡಿ​ದ್ದಾರೆ.

ಬಿಡಿಸಿ ನೋಡುವ ಮೊದಲೇ ಗ್ರಾಮಕ್ಕೆ ಹೋಗುವ ಬಸ್‌ ಬಂದಿದ್ದರಿಂದ ತರಾ​ತುರಿ​ಯಲ್ಲಿ ಶ್ರೀರಾ​ಮ​ರೆಡ್ಡಿ ಬಸ್‌ ಹತ್ತಿ​ದ್ದಾರೆ. ಅಲ್ಲಿಂದ 10 ಕಿ.ಮೀ. ದೂರದಲ್ಲಿರುವ ತಮ್ಮೂರಿನ ಕ್ರಾಸ್‌ನಲ್ಲಿ ಇಳಿದ ಶ್ರೀರಾ​ಮ​ರೆ​ಡ್ಡಿಗೆ ತಾವು ಪಟ್ಟಣದಲ್ಲಿ ಖರೀ​ದಿ​ಸಿದ ತರ​ಕಾ​ರಿ ಇದ್ದ ಚೀಲದ ತೂಕಕ್ಕೂ ಈ ಚೀಲದ ತೂಕಕ್ಕೂ ವ್ಯತ್ಯಾ​ಸ​ವಿ​ರು​ವುದು ಗಮ​ನಕ್ಕೆ ಬಂದಿದೆ. 

ಕವರ್‌ನಲ್ಲಿ ಕಂತೆ ಕಂತೆ ನೋಟು!: ಅನು​ಮಾ​ನ​ದಿಂದ ಕವರ್‌ ಬಿಚ್ಚಿ ನೋಡಿದ ಶ್ರೀರಾಮರೆಡ್ಡಿಗೆ ಕ್ಷಣ ಕಾಲ ಅಚ್ಚರಿ. ಯಾಕೆಂದರೆ ಆ ಕವ​ರ್‌​ನಲ್ಲಿ ತರಕಾರಿ ಬದಲು ಇದ್ದದ್ದು ನೂರಿನ್ನೂರು ರುಪಾ​ಯಿ ಕೊಟ್ಟು ಖರೀದಿಸಿದ್ದ ತರಕಾರಿ ಬದಲು ಸಾವಿರ, ಐನೂರು ಮುಖಬೆಲೆಯ ಕಂತೆ ಕಂತೆ ನೋಟು. 

ಈ ಚೀಲ​ವನ್ನು ಪೊಲೀಸ್‌ ಠಾಣೆಯ ಆವ​ರ​ಣ​ದಿಂದ ತಂದಿ​ದ್ದ​ರಿಂದ ಸ್ವಲ್ಪ ಆತಂಕವೂ ಇತ್ತು. ಆದರೂ ಆಸೆಗೆ ಬೀಳದೆ, ಪ್ರಾಮಾಣಿಕವಾಗಿ ಈ ವಿಚಾರವನ್ನು ಅದೇ ಠಾಣೆಯ ಎಎಸ್ಸೈಗೆ ಫೋನ್‌ ಮಾಡಿ ತಿಳಿಸಿದ್ದಾರೆ. ತಕ್ಷಣ ಎಎಸ್ಸೈ, ‘‘ಆ ಹಣ ತಮ್ಮದೆ'' ಎಂದು ತಿಳಿಸಿ, ‘‘ನೀವು ಎಲ್ಲಿದ್ದಿರೋ ಅಲ್ಲೇ ಇರಿ. ನಾನು ಪೇದೆಯೊಬ್ಬರನ್ನು ಕಳಿಸುತ್ತೇನೆ'' ಎಂದು ಉತ್ತ​ರಿ​ಸಿ​ದ್ದಾರೆ.

ಅದರಂತೆ ಶ್ರೀರಾಮರೆಡ್ಡಿ ಮತ್ತು ಅವರ ಜತೆಗೆ ಠಾಣೆಗೆ ಬಂದಿದ್ದ ಸಹ​ಚರ ಊರಿನ ಕ್ರಾಸ್‌ ಬಳಿಯೇ ನಿಂತಿದ್ದಾರೆ. ಅಲ್ಲಿಗೆ ಬಂದ ಪೇದೆ ‘‘ಹಣವನ್ನು ಠಾಣೆಯಲ್ಲೇ ಕೊಟ್ಟು ಬರುವುದನ್ನು ಬಿಟ್ಟು, ಇಲ್ಲಿವರೆಗೂ ತಂದಿದ್ದೀರಾ'' ಎಂದು ಗದರಿಸಿ, ಜತೆಯಲ್ಲಿದ್ದ ಸಹಚರನ ಕೆನ್ನೆಗೆ ಬಾರಿಸಿದ್ದಾರೆ. ನಂತರ ಹಣ ಎಣಿಸಿದಾಗ ರೂ.1000 ಮುಖಬೆಲೆಯ ಒಂದು ಕಂತೆ ಮತ್ತು ರೂ.500 ಮುಖಬೆಲೆಯ 4 ಕಂತೆ ಸೇರಿ ಒಟ್ಟು ರೂ.3 ಲಕ್ಷ ಇತ್ತು. ‘‘ಹಣ ಸರಿಯಾ​ಗಿದೆ'' ಎಂದು ಹೇಳಿದ ಪೇದೆ ಹಣದೊಂದಿಗೆ ಅಲ್ಲಿಂದ ಜಾಗ ಖಾಲಿ ಮಾಡಿದ್ದಾರೆ.

ಕಾರು ಖರೀದಿಸಿದ ಪೇದೆ!: ಶ್ರೀರಾಮರೆಡ್ಡಿ ಅವರಿಂದ ಪಡೆದ ಹಣ ಪೊಲೀಸ್‌ ಸಿಬ್ಬಂದಿಯದೇ. ಅದೇ ಹಣದಲ್ಲಿ ಅವರು ಕಾರು ಖರೀದಿಸಿರುವುದಾಗಿ ಸ್ವತಃ ಚಿಂತಾಮಣಿ ಗ್ರಾಮಾಂತರ ವೃತ್ತ ನಿರೀಕ್ಷಕ ಆನಂದ್‌ಕುಮಾರ್‌ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ. ಆದರೆ, ಪೇದೆ ಅಷ್ಟುದೊಡ್ಡ ಮೊತ್ತದ ಹಣ​ವನ್ನು ಕೋತಿ ಕೈಗೆ ಸಿಗುವಂತೆ ಎಲ್ಲಿ ಮತ್ತು ಏಕೆ ಇಟ್ಟಿದ್ದರು ಎಂಬ ಪ್ರಶ್ನೆಗೆ ವೃತ್ತ ನಿರೀಕ್ಷಕರ ಬಳಿ ಉತ್ತರವಿಲ್ಲ.

(epaper.kannadaprabha.in)

Follow Us:
Download App:
  • android
  • ios