ನಾವು ನೀವು ತಿನ್ನುವ ಊಟ ಬಹುತೇಕ ವಿಷಕಾರಿ. ಹಾಗಂತ ಅಡುಗೆ ಮನೆಯಲ್ಲಿ ಯಾರೂ ವಿಷ ಹಾಕುವುದಿಲ್ಲ. ಆಹಾರ ಪದಾರ್ಥಗಳು ಅಡುಗೆ ಮನೆ​ ತಲುಪುವ ಹೊತ್ತಿಗೆ ಎಲ್ಲವೂ ಹಾಳಾಗಿರುತ್ತದೆ. ಯಾಕೆಂದರೆ ತರಕಾರಿ ಮತ್ತು ಹಣ್ಣಲ್ಲಿ ಕಾರ್ಕೋಟಕ ವಿಷ ಮಿಳಿತಗೊಂಡಿದೆ. ಇದು ಸುವರ್ಣ ನ್ಯೂಸ್ ಕವರ್ ಸ್ಟೋರಿ ತಂಡ ರಹಸ್ಯ ಕಾರ್ಯಾಚರಣೆಯಲ್ಲಿ ಬಯಲಾಗಿದೆ.

ಬೆಂಗಳೂರು(ನ.12): ನಾವು ನೀವು ತಿನ್ನುವ ಊಟ ಬಹುತೇಕ ವಿಷಕಾರಿ. ಹಾಗಂತ ಅಡುಗೆ ಮನೆಯಲ್ಲಿ ಯಾರೂ ವಿಷ ಹಾಕುವುದಿಲ್ಲ. ಆಹಾರ ಪದಾರ್ಥಗಳು ಅಡುಗೆ ಮನೆ​ ತಲುಪುವ ಹೊತ್ತಿಗೆ ಎಲ್ಲವೂ ಹಾಳಾಗಿರುತ್ತದೆ. ಯಾಕೆಂದರೆ ತರಕಾರಿ ಮತ್ತು ಹಣ್ಣಲ್ಲಿ ಕಾರ್ಕೋಟಕ ವಿಷ ಮಿಳಿತಗೊಂಡಿದೆ. ಇದು ಸುವರ್ಣ ನ್ಯೂಸ್ ಕವರ್ ಸ್ಟೋರಿ ತಂಡ ರಹಸ್ಯಕಾರ್ಯಾಚರಣೆಯಲ್ಲಿ ಬಯಲಾಗಿದೆ.

ಇಂಥಾ ಎಚ್ಚರಿಕೆ ನಿಮಗೆ ಕೊಡಲೇಬೇಕಿದೆ ಯಾಕಂದ್ರೆ ನಮ್ಮ ಬಾಳಿಗೆ ವಿಷ ಹಿಂಡೋ ಅತ್ಯಂತ ಅಪಾಯಕಾರಿ ಬೆಳವಣಿಗೆ ನಮ್ಮ ರಾಜ್ಯದಲ್ಲಿ ನಡೆಯುತ್ತಿದೆ. ರಾಜ್ಯದ ಕೃಷಿ ಹಾಗೂ ತೋಟಗಾರಿಕಾ ಇಲಾಖೆ ಸಕ್ರಿಯವಾಗಿ ಕಾರ್ಯ ನಿರ್ವಹಿಸದ ಕಾರಣ ಕರಾಳ ಮಾಫಿಯಾವೊಂದು ಕಳ್ಳಾಟ ಆಡುತ್ತಿದೆ. ಈ ಕಳ್ಳಾಟವನ್ನು ಸುವರ್ಣ ನ್ಯೂಸ್​'ನ ಕವರ್​ಸ್ಟೋರಿ ತಂಡ ಬಯಲು ಮಾಡಿದೆ.

ನಿಷೇಧಿತ ವಿಷ ಮಾರ್ತಿದೆ ಮಾಫಿಯಾ!: ಔಷಧಿ ಅಂಗಡಿಗಳಲ್ಲೇ ಅಕ್ರಮ ದಂಧೆ

ನಮ್ಮ ರಾಜ್ಯದಲ್ಲಿ ಸರ್ಕಾರವೇ ನಿಷೇಧಿಸಿರುವ ಅಪಾಯಕಾರಿ ಕ್ರಿಮಿ ಕೀಟನಾಶಕಗಳ ಬಳಕೆಯಾಗುತ್ತಿದೆ. ಹಣ್ಣು ತರಕಾರಿಗೆ ಬಳಸಲೇ ಬಾರದು ಎಂದು ನಿಷೇಧಿಸಲಾಗಿರುವ ಕೀಟ ನಾಶಕಗಳನ್ನು ಬಿಂದಾಸಾಗಿ ಮಾರಾಟ ಮಾಡುವ ಅಂಶ ರಹಸ್ಯ ಕಾರ್ಯಾಚರಣೆಯಲ್ಲಿ ಬಯಲಾಗಿದೆ.

ಮಾಫಿಯಾ ಮಂದಿ ಜೊತೆ ಕೈ ಜೋಡಿಸಿರುವ ಔಷಧಿ ಅಂಗಡಿ ಮಾಲೀಕರು ಕೀಟನಾಶಕಗಳು ಬ್ಯಾನ್​ ಆಗಿದೆ ಅಂತ ಗೊತ್ತಿದ್ದರೂ ಕಮಿಷನ್​ ಆಸೆಗೆ ರೈತರ ಕೈಗೆ ವಿಷ ಕೊಡುತ್ತಿದ್ದಾರೆ. ಈ ಮಾಫಿಯಾ ಮಂದಿ ಈಗ ಬಯೋ-ಕೆಮಿಕಲ್​ ಹೆಸರಲ್ಲೂ ನಿಷೇಧಿತ ಔಷಧಿ ಮಾರಿ ರೈತರಿಗೆ ಮೋಸ ಮಾಡುತ್ತಿದ್ದಾರೆ.

ದುರಂತ ಎಂದರೆ ಇದನ್ನ ತಡೀಬೇಕಾದ ಅಧಿಕಾರಿಗಳಿಗೆ ನಿಷೇಧಿತ ಔಷಧಿಗಳ ಬಗ್ಗೆ ಜ್ಞಾನವೇ ಇಲ್ಲ. ಅಲ್ಲದೆ ಈ ಅಕ್ರಮ ತಡೆಯಲು ಯಾವ ಕ್ರಮಗಳನ್ನೂ ಕೈಗೊಳ್ಳುತ್ತಿಲ್ಲ. ಇನ್ನಾದರೂ ಕೃಷಿ ಸಚಿವರು ಎಚ್ಚೆತ್ತುಕೊಂಡು ವಿಷ ಮಾಫಿಯಾಕ್ಕೆ ಬ್ರೇಕ್​ ಹಾಕೋ ದಿಟ್ಟ ನಿರ್ಧಾರ ಮಾಡಲಿ.