ಕುಂಭಮೇಳಕ್ಕಾಗಿ ವಿಶೇಷ ಕಾರ್ಡ್; ಎಲ್ಲಿ ಬೇಕಾದ್ರೂ ಶಾಪಿಂಗ್ ಮಾಡಿ!
2019 ರ ಉತ್ತರ ಪ್ರದೇಶದ ಕುಂಭ ಮೇಳಕ್ಕಾಗಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ವಿಶೇಷ ಕಾರ್ಡ್ ಬಿಡುಗಡೆ ಮಾಡಿದೆ. ಕುಂಭ ಮೇಳಕ್ಕೆ ಬರುವ ಸಾರ್ವಜನಿಕರು, ಈ ವಿಶೇಷ ಕಾರ್ಡ್‌ಗಳ ಮೂಲಕವೇ ಯಾವುದೇ ಅಂಗಡಿ ಗಳಿಂದ ಏನು ಬೇಕಾದರೂ ಖರೀದಿ ಮಾಡಬಹುದಾಗಿದೆ.
ನವದೆಹಲಿ (ಡಿ. 24): 2019 ರ ಉತ್ತರ ಪ್ರದೇಶದ ಕುಂಭ ಮೇಳಕ್ಕಾಗಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ವಿಶೇಷ ಕಾರ್ಡ್ ಬಿಡುಗಡೆ ಮಾಡಿದೆ. ಕುಂಭ ಮೇಳಕ್ಕೆ ಬರುವ ಸಾರ್ವಜನಿಕರು, ಈ ವಿಶೇಷ ಕಾರ್ಡ್‌ಗಳ ಮೂಲಕವೇ ಯಾವುದೇ ಅಂಗಡಿಗಳಿಂದ ಏನು ಬೇಕಾದರೂ ಖರೀದಿ ಮಾಡಬಹುದಾಗಿದೆ.
ಕುಂಭಮೇಳಕ್ಕೆ ಬರುವವರಿಗೆ ಯಾವ ಈ ಸಮಸ್ಯೆಯಾಗಬಾರದು ಎಂಬ ಕಾರಣಕ್ಕಾಗಿ ಈ ವಿಶೇಷ ಕಾರ್ಡ್ ಬಿಡುಗಡೆ ಮಾಡಲಾಗಿದೆ. ಇಂಟರ್ನೆಟ್ ಇಲ್ಲದಿದ್ದರೂ ಈ ಕಾರ್ಡ್ ಬಳಸಬಹುದು. 12 ವರ್ಷ ಗಳಿಗೊಮ್ಮೆ ನಡೆಯಲಿರುವ
ಈ ಕುಂಭಮೇಳದಲ್ಲಿ ಈ ಬಾರಿ 12 ಕೋಟಿ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆ ಇದೆ.