ಮತ್ತೆ ಪ್ರಧಾನಿ ಮೋದಿ ವಿರುದ್ದ ವಾಗ್ದಾಳಿ ನಡೆಸಿದ ರಾಹುಲ್! ಮಲ್ಯ ಪರಾರಿಯಾಗಲು ಮೋದಿ ನೆಚ್ಚಿನ ಸಿಬಿಐ ಅಧಿಕಾರಿ ಕಾರಣ! ಟ್ವೀಟರ್‌ನಲ್ಲಿ ಗಂಭೀರ ಆರೋಪ ಮಾಡಿದ ರಾಹುಲ್ ಗಾಂಧಿ! ಗುಜರಾತ್ ಕೆಡರ್ ಸಿಬಿಐ ಅಧಿಕಾರಿ ಎ.ಕೆ. ಶರ್ಮಾ ವಿರುದ್ದ ಆರೋಪ! ನಿರವ್ ಮೋದಿ,ಮೆಹುಲ್ ಚೋಕ್ಸಿ ಪರಾರಿಯಾಗಲೂ ಶರ್ಮಾ ಕಾರಣ?

ನವದೆಹಲಿ(ಸೆ.15): ಪ್ರಧಾನಿ ನರೇಂದ್ರ ಮೋದಿ ಅವರ ‘ನೆಚ್ಚಿನ ಸಿಬಿಐ ಅಧಿಕಾರಿ’, ದೇಶಭ್ರಷ್ಟ ವಿಜಯ್ ಮಲ್ಯ ವಿರುದ್ಧದ ಲುಕ್ ಔಟ್ ನೋಟಿಸ್ ದುರ್ಬಲಗೊಳಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ರಾಹುಲ್, ಮಲ್ಯ ವಿದೇಶಕ್ಕೆ ಪರಾರಿಯಾಗಲು ಮೋದಿ ಅವರ ಈ ನೆಚ್ಚಿನ ಸಿಬಿಐ ಅಧಿಕಾರಿಯೇ ಕಾರಣ ಎಂದು ಆರೋಪಿಸಿದ್ದಾರೆ.

Scroll to load tweet…

ಗುಜರಾತ್ ಕೆಡರ್ ಸಿಬಿಐ ಅಧಿಕಾರಿ ಎ.ಕೆ. ಶರ್ಮಾ ಮಲ್ಯ ವಿರುದ್ಧದ ಲುಕ್ ಔಟ್ ನೋಟಿಸ್ ದುರ್ಬಲಗೊಳಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ ಎಂದು ರಾಹುಲ್ ಗಾಂಧಿ ನೇರ ಆರೋಪ ಮಾಡಿದ್ದಾರೆ.

ವಜ್ರ ಉದ್ಯಮಿಗಳಾದ ನಿರವ್ ಮೋದಿ ಹಾಗೂ ಮೆಹುಲ್ ಚೋಕ್ಸಿ ಸಹ ವಿದೇಶಕ್ಕೆ ಪರಾರಿಯಾಗುವಲ್ಲಿ ಇದೇ ಅಧಿಕಾರಿ ನಿರ್ಣಾಯಕ ಪಾತ್ರ ವಹಿಸಿದ್ದಾರೆ ಎಂದೂ ರಾಹುಲ್ ವಾಗ್ದಾಳಿ ನಡೆಸಿದ್ದಾರೆ.