ಹರಿದ್ವಾರ್ (ಫೆ.10): ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಬಗ್ಗೆ ಪ್ರಧಾನಿ ಮೋದಿ ಟೀಕೆ ಹರಿಹಾಯುತ್ತಿರುವ ಕಾಂಗ್ರೆಸ್ ಗೆ, ನನ್ನನ್ನು ಪರೀಕ್ಷಿಸಬೇಡಿ. ಮಿತಿಮೀರಿದರೆ ಯುಪಿಎ ಸರ್ಕಾರದ ಭ್ರಷ್ಟಾಚಾರವನ್ನು ಬಯಲಿಗೆಳೆಯುತ್ತೇನೆ ಎಂದು ಮೋದಿ ಗುಡುಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹರೀಶ್ ರಾವತ್ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಾ, ಆಧ್ಯಾತ್ಮ ಭೂಮಿ ಭ್ರಷ್ಟಾಚಾರಕ್ಕೆ ಅರ್ಹವಲ್ಲ. ಆದರೆ ಕಳೆದ ಕೆಲ ವರ್ಷಗಳಲ್ಲಿ ಸಾಕಷ್ಟು ಭ್ರಷ್ಟಾಚಾರ ಹಗರಣಗಳಿಗೆ ಈ ‘ದೇವಭೂಮಿ’ ಸಾಕ್ಷಿಯಾಗಿದೆ ಎಂದು ಮೋದಿ ಕಾಂಗ್ರೆಸ್ ಸರ್ಕಾರಕ್ಕೆ ಕಟುಕಿದ್ದಾರೆ.

ನಮ್ಮ ಸರ್ಕಾರವು ಬಡವರ ವಿರುದ್ಧವಾಗಿಲ್ಲ.ಅಧಿಕಾರದಲ್ಲಿದ್ದಾಗ ಬಡವರನ್ನು ಸುಲಿಗೆ ಮಾಡಿದವರನ್ನು ಖಂಡಿಸುತ್ತೇವೆ. ಕೇದಾರನಾಥದಲ್ಲಿ ನೈಸರ್ಗಿಕ ವಿಕೋಪ ಸಂಭವಿಸಿ ಪ್ರಾಣ ಹಾನಿ, ಆಸ್ತಿ-ಪಾಸ್ತಿ ಹಾನಿಯಾದಾಗ ಕಾಂಗ್ರೆಸ್ ನಾಯಕರು ವಿದೇಶ ಪ್ರವಾಸದಲ್ಲಿದ್ದರು. ಇದನ್ನು ದೇಶ ಮರೆಯುವುದಿಲ್ಲ. ನನ್ನ ಮಿತಿಯನ್ನು ದಾಟಲು ಇಷ್ಟವಿಲ್ಲ. ಆದರೆ ಕಾಂಗ್ರೆಸ್ ಪದೇಪದೇ ನನ್ನನ್ನು ಕೆದಕುತ್ತಿದ್ದರೆ ಅವರ ಿತಿಹಾಸವನ್ನು ನಾನು ಬಯಲಿಗೆಳೆಯುತ್ತೇನೆ ಎಂದು ಚುನಾವಣಾ ರ್ಯಾಲಿಯಲ್ಲಿ ಗುಡುಗಿದ್ದಾರೆ.