ಸಂಸತ್ತಿನ ಚಳಿಗಾಲ ಅಧಿವೇಶನವಾದ ಆರಂಭದ ದಿನದಿಂದ ಪ್ರತಿಪಕ್ಷಗಳು ನೋಟುಗಳ ಅಪಮೌಲ್ಯೀಕರಣ ಕುರಿತು ಚರ್ಚೆಯಾಗಬೇಕೆಂದೂ, ಪ್ರಧಾನಿ ನರೇಂದ್ರ ಮೋದಿ ಖುದ್ದಾಗಿ ಬಂದು ಸ್ಪಷ್ಟೀಕರಣ ನೀಡಬೇಕೆಂದು ಪಟ್ಟುಹಿಡಿದಿದ್ದವು.

ನವದೆಹಲಿ (ನ.24): ರಾಜ್ಯಸಭೆಯಲ್ಲಿ ರೂ.500 ಹಾಗೂ ರೂ.1000 ನೋಟುಗಳ ಅಪಮೌಲ್ಯೀಕರಣ ಕುರಿತ ಚರ್ಚೆಯಲ್ಲಿ ಕೊನೆಗೂ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದಾರೆ.

ಸಂಸತ್ತಿನ ಚಳಿಗಾಲ ಅಧಿವೇಶನವಾದ ಆರಂಭದ ದಿನದಿಂದ ಪ್ರತಿಪಕ್ಷಗಳು ನೋಟುಗಳ ಅಪಮೌಲ್ಯೀಕರಣ ಕುರಿತು ಚರ್ಚೆಯಾಗಬೇಕೆಂದೂ, ಪ್ರಧಾನಿ ನರೇಂದ್ರ ಮೋದಿ ಖುದ್ದಾಗಿ ಬಂದು ಸ್ಪಷ್ಟೀಕರಣ ನೀಡಬೇಕೆಂದು ಪಟ್ಟುಹಿಡಿದಿದ್ದವು.

ರಾಜ್ಯಸಭೆಯಲ್ಲಿ ಇಂದು ನಡೆದ ಚರ್ಚೆಯಲ್ಲಿ ಭಾಗವಹಿಸಿದ ಮಾಜಿ ಪ್ರಧಾನಿ ಮನಮೊಹನ್ ಸಿಂಗ್, ಸರ್ಕಾರದ ಅಪಮೌಲ್ಯೀಕರಣ ಕ್ರಮವನ್ನು ಟೀಕಿಸಿದ್ದಾರೆ.