ಬೆಂಗಳೂರು (ಸೆ.19): ಪ್ರಧಾನಿಗಳು ಮಧ್ಯ ಪ್ರವೇಶ ಮಾಡಬೇಕು. ಅವರು ಕುಳಿತು ಮಾತಾನಾಡಿದರೆ ಒಂದು ಗಂಟೆಯಲ್ಲಿ ಸಮಸ್ಯೆ ಬಗೆಹರಿಸಬಹುದು. ಮಹದಾಯಿ ವಿಚಾರದಲ್ಲಿ ನಡೆದ ತಪ್ಪುಗಳೇ ಇಲ್ಲಿ ಮರುಕಳಿಸುತ್ತಿದೆ. ಪ್ರಧಾನಮಂತ್ರಿ ಮಧ್ಯಪ್ರವೇಶ ಮಾಡಲೇಬೇಕು ಎಂದು ವಾಟಾಳ್ ನಾಗರಾಜ್ ಒತ್ತಾಯಿಸಿದ್ದಾರೆ.

ನಮ್ಮ ರಾಜ್ಯದ ಮುಖ್ಯಮಂತ್ರಿ ಕಳೆದ ಐದು ದಿನಗಳಿಂದ ಪ್ರಧಾನಮಂತ್ರಿಯನ್ನು ಭೇಟಿ ಮಾಡಿಲ್ಲ. ಭೇಟಿಗೆ ಅವಕಾಶ ಸಿಕ್ಕಿಲ್ಲ ಅಂತಾರೆ. ಇದು ನಂಬುವ ಮಾತಲ್ಲ. 3 ಸಾವಿರ ಕ್ಯೂಸೆಕ್ಸ್ ನೀರು ಬಿಡಲು ಸಾಧ್ಯವಿಲ್ಲ. ರಾಜ್ಯ ಸರ್ಕಾರ ಗಟ್ಟಿಯಾಗಿ ನಿಲ್ಲಬೇಕು ಎಂದು ವಾಟಾಳ್ ನಾಗರಾಜ್ ಹೇಳಿದ್ದಾರೆ.

ಜಯಲಲಿತಾ ಪಿತೂರಿ ಮತ್ತು ದ್ವೇಷವನ್ನು ನಾವು ವಿರೋಧಿಸಿ ನಾಳೆ ಬೆಳಗ್ಗೆ 11.30 ಕ್ಕೆ ಚಾಮರಾಜನಗರ-ಕೊಯಮತ್ತೂರು ಗಡಿ ಬಂದ್ ಮಾಡಲು ಕನ್ನಡಪರ ಸಂಘಟನೆಗಳ ನಿರ್ಧರಿಸಿವೆ ಎಂದಿದ್ದಾರೆ. 

ಪ್ರಧಾನಿಗಳು ಏನೂ ಮಾಡ್ತಿಲ್ಲ. ಅವರ ಪಕ್ಷದ ಅಧಿಕಾರ ಇಲ್ಲಿಲ್ಲ ಎಂದು ಕರ್ನಾಟಕವನ್ನು ಕಡೆಗಣಿಸುತ್ತಿದ್ದಾರೆ. ಎಲ್ಲರೂ ಶಾಂತಿಯನ್ನು ಕಾಪಾಡಿ. ನಾಳೆ ಸುಪ್ರೀಂ ಕೋರ್ಟ್ ತೀರ್ಮಾನ ನೋಡಿ ಮುಂದಿನ ಹೋರಾಟ ನಿರ್ಧಾರ ಮಾಡಲಾಗುವುದು ಎಂದು ವಾಟಾಳ್ ಹೇಳಿದ್ದಾರೆ.