ಅವರು ನನ್ನ ಪಾಲಿನ ಪ್ರಭು ಶ್ರೀರಾಮ: ಜಶೋಧಾಬೆನ್..!

PM's Wife Rebuts Anandiben Patel On Marital Status
Highlights

ಮೋದಿ ನನ್ನ ಪಾಲಿನ ಪ್ರಭು ಶ್ರೀರಾಮ

ಮೋದಿ ಪತ್ನಿ ಜಶೋಧಾಬೆನ್ ಹೇಳಿಕೆ

ಮಧ್ಯಪ್ರದೇಶ ರಾಜ್ಯಪಾಲೆ ಆನಂದಿಬೆನ್ ಪಟೇಲ್ ಹೇಳಿಕೆಗೆ ಗರಂ

ಜಶೋಧಾಬೆನ್‌ರನ್ನು ಮೋದಿ ಮದುವೆಯಾಗಿಲ್ಲ ಎಂದಿದ್ದ ಆನಂದಿಬೆನ್

ಅಹಮದಾಬಾದ್(ಜೂ.21): ಪ್ರಧಾನಿ ನರೇಂದ್ರ ಮೋದಿ ತಮ್ಮ ಪಾಲಿಗೆ ಪ್ರಭು ಶ್ರೀರಾಮ ಇದ್ದಂತೆ ಎಂದು ಮೋದಿ ಪತ್ನಿ ಜಶೋಧಾಬೆನ್ ಹೇಳಿದ್ದಾರೆ. ತಮ್ಮ ಮದುವೆ ಕುರಿತು ಮಧ್ಯಪ್ರದೇಶ ರಾಜ್ಯಪಾಲೆ ಆನಂದಿಬೆನ್ ಪಟೇಲ್ ಆಡಿದ ಮಾತುಗಳು ಜಶೋಧಾಬೆನ್ ಅವರನ್ನು ಕೆರಳಿಸಿದೆ.

ಪ್ರಧಾನಿ ಮೋದಿ ಅವರು ಜಶೋಧಾಬೆನ್ ಅವರನ್ನು ಮದುವೆಯಾಗಿಲ್ಲ ಎಂದು ಮಧ್ಯಪ್ರದೇಶ ರಾಜ್ಯಪಾಲೆ ಆನಂದಿಬೆನ್ ಪಟೇಲ್ ಹೇಳಿದ್ದರು. ಈ ಕುರಿತು ಅಸಮಾಧಾನ ವ್ಯಕ್ತಪಡಿಸಿರುವ ಜಶೋಧಾಬೆನ್, ಇವು ಆನಂದಿಬೆನ್ ಅವರಂತಹ ಪ್ರಬುದ್ಧರು ಆಡುವ ಮಾತುಗಳಲ್ಲ ಎಂದು ಹರಿಹಾಯ್ದಿದ್ದಾರೆ.

2014ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಖುದ್ದು ಮೋದಿ, ತಾವು ಮದುವೆಯಾಗಿರುವುದಾಗಿ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅರ್ಜಿಯಲ್ಲಿ ತಿಳಿಸಿದ್ದಾರೆ. ಅಲ್ಲದೇ ಜಶೋಧಾಬೆನ್ ತಮ್ಮ ಪತ್ನಿ ಎಂದು ನಮೂದಿಸಿದ್ದಾರೆ. ಈ ವಿಷಯ ಗೊತ್ತಿದ್ದರೂ ಆನಂದಿಬೆನ್ ಪಟೇಲ್ ಈ ರೀತಿಯ ಹೇಳಿಕೆ ನೀಡಿರುವುದು ಸರಿಯಲ್ಲ ಎಂದು ಅವರು ಕಿಡಿಕಾರಿದ್ದಾರೆ.

ಮೋದಿ ತಮ್ಮ ಪಾಲಿಗೆ ಪ್ರಭು ಶ್ರೀರಾಮ ಇದ್ದಂತೆ. ಅವರ ಬಗ್ಗೆ ತಮಗೆ ಯಾವಾಗಲೂ ಹೆಮ್ಮೆ ಮತ್ತು ಗೌರವ ಇದ್ದೇ ಇರುತ್ತದೆ ಎಂದು ಜಶೋಧಾಬೆನ್ ಹೇಳಿದ್ದಾರೆ. ಆದರೆ ಯಾರಾದರೂ ಅವರ ಮದುವೆ ವಿಷಯ ಪ್ರಸ್ತಾಪಿಸಿ ತಮ್ಮನ್ನು ಇರುಸುಮುರುಸು ಮಾಡಿದರೆ ತಾವು ಸುಮ್ಮನಿರಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

loader