ಜಗಜ್ಯೋತಿ ಬಸವೇಶ್ವರರ ಕೊಡುಗೆ ಸ್ಮರಿಸಿದ ಪ್ರಧಾನಿ

First Published 8, Feb 2018, 9:51 AM IST
PM Remember Jagajyothi Basaveshwara
Highlights

ಕರ್ನಾಟಕದಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮ ಸ್ಥಾಪನೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷ ಹಾಗೂ ಬಿಜೆಪಿ ನಡುವೆ ಭಾರೀ ಜಟಾಪಟಿ ನಡೆದಿರುವ ನಡುವೆಯೇ ಲೋಕಸಭೆಯಲ್ಲಿ ಬುಧವಾರ ಮಾಡಿದ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕದ 12ನೇ ಶತಮಾನದ ಸಮಾಜ ಸುಧಾರಣೆಯ ಹರಿಕಾರ ಜಗಜ್ಯೋತಿ ಬಸವೇಶ್ವರರ ಕೊಡುಗೆ ಯನ್ನು ಸ್ಮರಿಸಿ ಅಚ್ಚರಿ ಮೂಡಿಸಿದರು.

ನವದೆಹಲಿ: ಕರ್ನಾಟಕದಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮ ಸ್ಥಾಪನೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷ ಹಾಗೂ ಬಿಜೆಪಿ ನಡುವೆ ಭಾರೀ ಜಟಾಪಟಿ ನಡೆದಿರುವ ನಡುವೆಯೇ ಲೋಕಸಭೆಯಲ್ಲಿ ಬುಧವಾರ ಮಾಡಿದ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕದ 12ನೇ ಶತಮಾನದ ಸಮಾಜ ಸುಧಾರಣೆಯ ಹರಿಕಾರ ಜಗಜ್ಯೋತಿ ಬಸವೇಶ್ವರರ ಕೊಡುಗೆ ಯನ್ನು ಸ್ಮರಿಸಿ ಅಚ್ಚರಿ ಮೂಡಿಸಿದರು.

ತಮ್ಮ ಭಾಷಣದ ಹಲವಾರು ನಿಮಿಷಗಳನ್ನು ಕರ್ನಾಟಕದ ವಿದ್ಯಮಾನಗಳಿಗೆ ಮೀಸಲು ಇರಿಸಿದ ಮೋದಿ, ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಟಾಂಗ್ ನೀಡುವ ಭರದಲ್ಲಿ ಬಸವೇಶ್ವರರು ಹಾಗೂ ಅವರ ಅನುಭವ ಮಂಟಪವನ್ನು ಉಲ್ಲೇಖಿಸಿದರು. ‘ಕಾಂಗ್ರೆಸ್ ಪಕ್ಷವು ನೆಹರು ಅವರು ಭಾರತದ ಪ್ರಜಾಪ್ರಭುತ್ವದ ವಾಸ್ತುಶಿಲ್ಪಿ ಎಂದು ಹೇಳಿ ಕೊಳ್ಳುತ್ತದೆ. ಆದರೆ 800 ವರ್ಷದ ಹಿಂದೆಯೇ ಅನುಭವ ಮಂಟಪದ ಮೂಲಕ ಬಸವಣ್ಣ ಅವರು ಈ ಪರಿಕಲ್ಪನೆಯನ್ನು ಹುಟ್ಟು ಹಾಕಿದ್ದರು’ ಎಂದು ಮೋದಿ ಕೊಂಡಾಡಿದರು.

ಏನಿದು ಅನುಭವ ಮಂಟಪ?: ಕರ್ನಾಟಕದ ಬಸವಕಲ್ಯಾಣದಲ್ಲಿ ಬಸವೇಶ್ವರರು `12ನೇ ಶತಮಾನ ದಲ್ಲೇ ‘ಅನುಭವ ಮಂಟಪ’ ಎಂಬ ಚರ್ಚಾ ವೇದಿಕೆಯನ್ನು ಸೃಷ್ಟಿಸಿದ್ದರು. ಅನುಭವ ಮಂಟಪದಲ್ಲಿ ಅನೇಕ ಪ್ರಮುಖ ವಿಚಾರಗಳನ್ನು ಚರ್ಚಿಸಿ ನಿರ್ಧಾರ ತಗೆದುಕೊಳ್ಳಲಾಗುತ್ತಿತ್ತು. ಮಹಿಳೆಯರಿಗೂ ಅನುಭವ ಮಂಟಪದಲ್ಲಿ ಅವಕಾಶ ಕಲ್ಪಿಸಿ ಅವರ ಅನಿಸಿಕೆಗೂ ಮನ್ನಣೆ ನೀಡ ಲಾಗುತ್ತಿತ್ತು.

loader