ಬೋಗಿಬೀಲ್(ಡಿ.25): ದೇಶದ ಅತ್ಯಂತ ಉದ್ದದ ಬೋಗಿಬೀಲ್ ರೈಲು ಮತ್ತು ರಸ್ತೆ ಸೇತುವೆಯನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಲೋಕಾರ್ಪಣೆ ಮಾಡಿದರು.

"

ಅಸ್ಸಾಂ ಮತ್ತು ಅರುಣಾಚಲ ಪ್ರದೇಶದ ನಡುವಣ ಪ್ರಮುಖ ಸಂಪರ್ಕ ಮಾರ್ಗದಲ್ಲಿ 5,900 ಕೋಟಿ ರೂ ವೆಚ್ಚದಲ್ಲಿ ಈ ಸೇತುವೆ ನಿರ್ಮಾಣವಾಗಿದ್ದು, ಇಂದಿನಿಂದ ಸಂಚಾರಕ್ಕೆ ಮುಕ್ತಗೊಂಡಿದೆ. 

1997ರಲ್ಲಿ ಎಚ್‌.ಡಿ. ದೇವೇಗೌಡರು ಪ್ರಧಾನಿಯಾಗಿದ್ದಾಗ ಈ ಸೇತುವೆ ಯೋಜನೆಗೆ ಅಡಿಗಲ್ಲು ಹಾಕಲಾಗಿತ್ತು. ನಂತರ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ-1 ಸರಕಾರ 2002ರಲ್ಲಿ ಸೇತುವೆಯ ಕಾಮಗಾರಿ ಆರಂಭಿಸಿತು.

2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ-2 ಸರಕಾರ ಬಂದ ನಂತರ ಕೇವಲ ನಾಲ್ಕು ವರ್ಷಗಳ ಅವಧಿಯಲ್ಲಿ ಸೇತುವೆ ಕಾಮಗಾರಿ ಪೂರ್ಣಗೊಂಡು ಇದೀಗ ಉದ್ಘಾಟನೆಯಾಗಿದೆ.

ಬೋಗಿಬೀಲ್ ಸೇತುವೆ ತುರ್ತು ಸಂದರ್ಭದಲ್ಲಿ ಯುದ್ಧ ವಿಮಾನವನ್ನು ಕೂಡ ಸುರಕ್ಷಿತವಾಗಿ ಲ್ಯಾಂಡಿಂಗ್‌ ಮಾಡುವಷ್ಟು ಸುಭದ್ರವಾಗಿದೆ. ಪೂರ್ಣವಾಗಿ ವೆಲ್ಡಿಂಗ್ ಮೂಲಕ ನಿರ್ಮಿಸಿದ ದೇಶದ ಏಕೈಕ ಹಾಗೂ ಮೊದಲ ಸೇತುವೆ ಇದಾಗಿದೆ.  4.9ಕಿ.ಮೀ ಉದ್ದದ ಬೃಹತ್‌ ಸೇತುವೆ ದೇಶದಲ್ಲೇ ಅತ್ಯಂತ ಉದ್ದನೆಯ ರೈಲ್ ರೋಡ್‌ ಸೇತುವೆ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

ಏನೆಲ್ಲಾ ವಿಶೇಷತೆಗಳು?:
1. ಅರುಣಾಚಲ ಪ್ರದೇಶದ ಇಟಾನಗರ್ ಹಾಗೂ ಅಸ್ಸಾಂನ ದಿಬ್ರೂಗಢ ನಡುವೆ ಸೇತುವೆ ಸಂಪರ್ಕ ಕೊಂಡಿಯಾಗಿದೆ.

2. ಈ ಎರಡು ನಗರಗಳ ನಡುವಿನ ಪ್ರಯಾಣ ಅಂತರ 150 ಕಿ.ಮೀ ಇಳಿಯಲಿದೆ. ರೈಲು ಪ್ರಯಾಣದಲ್ಲಿ 750 ಕಿ.ಮೀ ಉಳಿತಾಯವಾಗಲಿದೆ.  ಒ

3. ಒಟ್ಟಾರೆ 5960 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಸೇತುವೆ

4. 30 ಲಕ್ಷ ಬ್ಯಾಗ್‌ ಸಿಮೆಂಟ್, 19,250 ಟನ್‌ ಸ್ಟೀಲ್ ಹಾಗೂ 2800 ಟನ್‌ ಸ್ಟ್ರಕ್ಚರಲ್ ಸ್ಟೀಲ್ ಬಳಕೆ

5. ಮೇಲ್ಬಾಗದಲ್ಲಿ 3 ಪಥದ ರಸ್ತೆಯಿದ್ದರೆ, ಅಡಿಭಾಗದಲ್ಲಿ ದ್ವಿಪಥದ ಬ್ರಾಡ್‌ಗೇಜ್‌ ರೈಲು ಮಾರ್ಗ ನಿರ್ಮಿಸಲಾಗಿದೆ. 

6. ಬ್ರಹ್ಮಪುತ್ರಾ ನದಿಗೆ ಕಟ್ಟಿರುವ 4ನೇ ಸೇತುವೆ ಎಂಬ ಹೆಗ್ಗಳಿಕೆ

7. ಚೀನಾ ಗಡಿ ಭಾಗಕ್ಕೆ ಮಿಲಿಟರಿ ಅಗತ್ಯವನ್ನು ಪೂರೈಸಲು ಉಪಯುಕ್ತ

ಗೌಡರು ಶಂಕು ಸ್ಥಾಪನೆ ಮಾಡಿದ್ದ ಅತಿ ಉದ್ದನೆ ಸೇತುವೆ ಲೋಕಾರ್ಪಣೆಗೆ ಸಿದ್ಧ

ದೇವೇಗೌಡ ಘೋಷಿಸಿದ್ದ 2ನೇ ಸೇತುವೆ ಮೋದಿಯಿಂದ ಉದ್ಘಾಟನೆ!