ಬಿಜೆಪಿಗೆ ಅನಂತ್ ಕುಮಾರ್ ಅವರೇ ಆಸ್ತಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. ಅವರ ಜನ್ಮ ದಿನಕ್ಕೆ ಶುಭಾಶಯ ಕೋರಿದ ಅವರು ಈ ವೇಳೆ ಈ ಹೇಳಿಕೆ ನೀಡಿದ್ದಾರೆ. 

ಬೆಂಗಳೂರು: ಕೇಂದ್ರ ಸಚಿವ ಅನಂತಕುಮಾರ್ ಅವರ ಸಂಸದೀಯ ಅನುಭವ ನಮಗೆ ಆಸ್ತಿ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. 

ಸಚಿವ ಅನಂತಕುಮಾರ್ ಅವರ 59 ನೇ ಹುಟ್ಟುಹಬ್ಬಕ್ಕೆ ಶುಭ ಕೋರಿ ಟ್ವೀಟ್ ಮಾಡಿರುವ ನರೇಂದ್ರ ಮೋದಿ ಅವರು, ರಾಸಾಯನಿಕ ಹಾಗೂ ರಸಗೊಬ್ಬರ ಇಲಾಖೆಗಳ ಸುಧಾ ರಣೆ ನಿಟ್ಟಿನಲ್ಲಿ ಅನಂತಕುಮಾರ್ ಕೆಲಸ ಮಾಡುತ್ತಿದ್ದಾರೆ. 

ಸಂಸದೀಯ ವ್ಯವಹಾರಗಳ ಹೊಣೆಯನ್ನೂ ಹೊತ್ತಿರುವ ಅವರ ಆಡಳಿತಾತ್ಮಕ ಹಾಗೂ ಸಂಸದೀಯ ಅನುಭವಗಳು ನಮಗೆ ಆಸ್ತಿ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

Scroll to load tweet…