ಅ.29 ಕ್ಕೆ ಧರ್ಮಸ್ಥಳಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಲಿರುವ ಹಿನ್ನಲೆಯಲ್ಲಿ  ಅ. 28 ರ ಮಧ್ಯಾಹ್ನ 2 ರಿಂದ 29 ರ ಮಧ್ಯಾಹ್ನ 2 ರವರೆಗೆ ಭಕ್ತರ ಪ್ರವೇಶವನ್ನು ನಿಷೇಧೀಸಲಾಗಿದೆ.  ಧರ್ಮಸ್ಥಳ ಸುತ್ತಮುತ್ತ  ANF ನ 25 ತಂಡದಿಂದ ಇಂದಿನಿಂದ ಕೂಂಬಿಂಗ್ ಆರಂಭವಾಗಿದೆ.

ಮಂಗಳೂರು (ಅ.25): ಅ.29 ಕ್ಕೆ ಧರ್ಮಸ್ಥಳಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಲಿರುವ ಹಿನ್ನಲೆಯಲ್ಲಿ ಅ. 28 ರ ಮಧ್ಯಾಹ್ನ 2 ರಿಂದ 29 ರ ಮಧ್ಯಾಹ್ನ 2 ರವರೆಗೆ ಭಕ್ತರ ಪ್ರವೇಶವನ್ನು ನಿಷೇಧೀಸಲಾಗಿದೆ. ಧರ್ಮಸ್ಥಳ ಸುತ್ತಮುತ್ತ ANF ನ 25 ತಂಡದಿಂದ ಇಂದಿನಿಂದ ಕೂಂಬಿಂಗ್ ಆರಂಭವಾಗಿದೆ.

ಧರ್ಮಸ್ಥಳ ಸುತ್ತಮುತ್ತ ಮತ್ತು ಸೂಕ್ಷ್ಮ ಪ್ರದೇಶಗಳಲ್ಲಿ ನಕ್ಸಲ್ ನಿಗ್ರಹ ದಳದಿಂದ ಕಾರ್ಯಚರಣೆ ಆರಂಭವಾಗಿದೆ. 10 ಎಸ್ಪಿ ದರ್ಜೆಯ ಅಧಿಕಾರಿಗಳು, ಪಿ.ಎಸ್.ಐ ಮತ್ತು ಡಿ.ಎಸ್.ಪಿ ದರ್ಜೆಯ 150 ಅಧಿಕಾರಿಗಳು, 2000 ಕ್ಕೂ ಹೆಚ್ಚು ಪೊಲೀಸ್ ಪೇದೆಗಳಿಂದ ಕಾರ್ಯಚರಣೆ ಶುರುವಾಗಿದ್ದು, ಬಾಂಬ್ ನಿಷ್ಕ್ರಿಯ ದಳದ ಅಧಿಕಾರಿಗಳು ಕೂಡ ಸಾಥ್ ನೀಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಧೀರ್ ಕುಮಾರ್ ರೆಡ್ಡಿ ಮಾಹಿತಿ ನೀಡಿದ್ದಾರೆ.