ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿ ದೀಪಾವಳಿ ಹಬ್ಬವನ್ನ ವಿಶೀಷ್ಟ ಪ್ರದೇಶದಲ್ಲಿ ವಿಶೇಷವಾಗಿ ಆಚರಿಸುತ್ತಾರೆ. ಆದ್ರೆ ಈ ಬಾರಿಯ ದೀಪಾವಳಿ ಹಬ್ಬವನ್ನು ಎಲ್ಲಿ ಸೆಲೆಬ್ರೆಷನ್ ಮಾಡ್ತಾರೆ? ಇಲ್ಲಿದೆ. ವಿವರ.

ನವದೆಹಲಿ, [ನ.05]: ಜಮ್ಮು-ಕಾಶ್ಮೀರ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕಳೆದ ಬಾರಿಯ ದೀಪಾವಳಿ ಹಬ್ಬವನ್ನು ಜಮ್ಮು-ಕಾಶ್ಮೀರದ ಬಿಎಸ್ ಎಫ್ ಯೋಧರ ಜೊತೆ ಆಚರಿಸಿದ್ದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಜಮ್ಮು ಮತ್ತು ಕಾಶ್ಮೀರ ರಾಜ್ಯದ ಗಡಿ ನಿಯಂತ್ರಣ ರೇಖೆ ಬಳಿಯಲ್ಲಿರುವ ಗೂರೆಜ್ ಕಣಿವೆಯಲ್ಲಿ ಭಾರತೀಯ ಸೇನೆ ಮತ್ತು ಗಡಿ ಭದ್ರತಾ ಪಡೆ ಯೋಧರ ಜತೆ ಪ್ರಧಾನಿಗಳು ದೀಪಾವಳಿ ಆಚರಿಸಿದ್ದರು.

ಆದ್ರೆ ಈ ಬಾರಿ ದೀಪಾವಳಿಯನ್ನ ಮೋದಿ ಅವರು ಎಲ್ಲಿ ಆಚರಿಸಲಿದ್ದಾರೆ ಎನ್ನುವ ಕುತೂಹಲ ಕೆರಳಿಸಿದೆ. ಇದೀಗ ಅದಕ್ಕೆ ಉತ್ತರ ಸಿಕ್ಕಿದೆ. ಈ ಬಾರಿ ದೀಪಾವಳಿ ಹಬ್ಬವನ್ನ ಮೋದಿ ಅವರು ನಾಳೆ [ಮಂಗಳವಾರ] ಕೇದರನಾಥ್​ ದೇವಾಲಯದಲ್ಲಿ ಆಚರಿಸಲಿದ್ದಾರೆ.

2016ರ ದೀಪಾವಳಿಯನ್ನ ಹಿಮಾಚಲ ಪ್ರದೇಶದ ಇಂಡೋ ಟಿಬೆಟಿಯನ್ ಪೊಲೀಸ್ ಜೊತೆ ಮೊದಿ ದೀಪಾವಳಿಯನ್ನ ಆಚರಿಸಿದ್ದರು. ಇನ್ನು 2015ರಲ್ಲಿ ಅಮೃತಸರದಲ್ಲಿ ಯೋಧರೊಂದಿಗೆ ದೀಪಾವಳಿ ಆಚರಿಸಿದ್ದರು.

2014ರಲ್ಲಿ ಮೊದಲ ಬಾರಿಗೆ ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ಜಮ್ಮುಕಾಶ್ಮೀರಾದ ಸಿಯಾಚಿನ್​ನಲ್ಲಿ ಸೈನಿಕರೊಂದಿಗೆ ಆಚರಿಸಿದ್ದನ್ನು ಇಲ್ಲಿ ಸ್ಮರಿಸಬಹುದು.