ಸಂಸದರ ಕಡಿಮೆ ಹಾಜರಾತಿ ಮತ್ತು ನಿಧಾನಗತಿಯ ಕೆಲಸಕ್ಕಾಗಿ ಪ್ರಧಾನಿ ಮೋದಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಾನು ಯಾವಾಗಬೇಕಾದರೂ ನಿಮ್ಮನ್ನು ಕರೆಯಬಹುದು. ಇದನ್ನು ನೀವು ನಿರ್ಲಕ್ಷಿಸುವಂತಿಲ್ಲ ಎಂದು ಸಂಸದರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ನವದೆಹಲಿ (ಮಾ.21): ಸಂಸದರ ಕಡಿಮೆ ಹಾಜರಾತಿ ಮತ್ತು ನಿಧಾನಗತಿಯ ಕೆಲಸಕ್ಕಾಗಿ ಪ್ರಧಾನಿ ಮೋದಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಾನು ಯಾವಾಗಬೇಕಾದರೂ ನಿಮ್ಮನ್ನು ಕರೆಯಬಹುದು. ಇದನ್ನು ನೀವು ನಿರ್ಲಕ್ಷಿಸುವಂತಿಲ್ಲ ಎಂದು ಸಂಸದರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

Add Asianetnews Kannada as a Preferred SourcegooglePreferred

ಸಂಸತ್ತನ್ನು ಒಂದು ದಿನವೂ ಕೂಡಾ ತಪ್ಪಿಸಿಕೊಳ್ಳುವಂತಿಲ್ಲ. ಸಂಸತ್ ನಲ್ಲಿ ಭಾಗವಹಿಸುವುದು ಸಂಸದರ ಮೂಲಭೂತ ಜವಾಬ್ದಾರಿ. ಅದನ್ನು ವಿನಂತಿ ಮಾಡಿಸಿಕೊಳ್ಳಬಾರದು. ಅವರವರ ಕ್ಷೇತ್ರದ ಲಕ್ಷಾಂತರ ಜನರ ಪ್ರತಿನಿಧಿಯಾಗಿ ತಮ್ಮ ಕರ್ತವ್ಯ ನಿಭಾಯಿಸಬೇಕು ಎಂದು ಪ್ರಧಾನಿ ಮೋದಿ ಇಂದು ನಡೆದ ಸಂಸದೀಯ ಸಭೆಯಲ್ಲಿ ಹೇಳಿದ್ದಾರೆ.

ಬಜೆಟ್ ಅಧಿವೇಶನ ನಡೆಯುತ್ತಿದ್ದು ಸಂಸತ್ ಉಭಯ ಸದನಗಳಲ್ಲಿ ಸಂಸದರ ಗೈರು ಹಾಜರು ಎದ್ದು ಕಾಣುತ್ತಿತ್ತು. ಆಸನಗಳು ಖಾಲಿ ಬಿದ್ದಿದ್ದವು. ಇದನ್ನು ಸಂಸದೀಯ ವ್ಯವಹಾರಗಳ ಸಚಿವ ಅನಂತ್ ಕುಮಾರ್ ಪ್ರಸ್ತಾಪಿಸಿದರು. ಸದನದಲ್ಲಿ ಸಂಸದರ ಹಾಜರಿ ಪ್ರಮಾಣ ಕಡಿಮೆಯಿದ್ದಾಗ ಕೋರಮ್ ಗಂಟೆ ಬಾರಿಸುತ್ತದೆ. ಸಂಸದರು ಬರುವವರೆಗೆ ಕಲಾಪವನ್ನು ಸ್ಥಗಿತಗೊಳಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಸಂಸದರು ಆಗಾಗ ಸೇರುವ, ಅನೌಪಚಾರಿಕವಾಗಿ ಮಾತುಕತೆ ನಡೆಸುವ ಸೆಂಟ್ರಲ್ ಹಾಲ್ ನಲ್ಲಿದ್ದೇವೆ ಎಂದು ಹೇಳುವುದು ಸಮರ್ಥನೆಯಲ್ಲ. ಸದನದ ಒಳಗೆ ಇರುವುದು ಮುಖ್ಯ ಎಂದು ಮೋದಿ ಎಚ್ಚರಿಸಿದ್ದಾರೆ.