ಭಾರತೀಯ ನುರಿತ ಕೆಲಸಗಾರರನ್ನು ಸೇರಿಸಿಕೊಳ್ಳಲು ಮುಕ್ತ ಮನಸ್ಸನ್ನು ಇಟ್ಟುಕೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅಮೇರಿಕಾಗೆ ಒತ್ತಾಯಿಸಿದ್ದಾರೆ.

ನವದೆಹಲಿ (ಫೆ.21):  ಭಾರತೀಯ ನುರಿತ ಕೆಲಸಗಾರರನ್ನು ಸೇರಿಸಿಕೊಳ್ಳಲು ಮುಕ್ತ ಮನಸ್ಸನ್ನು ಇಟ್ಟುಕೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅಮೇರಿಕಾಗೆ ಒತ್ತಾಯಿಸಿದ್ದಾರೆ.

ಸಾಫ್ಟ್ ವೇರ್ ತಜ್ಞರನ್ನು ಪ್ರಾಜೆಕ್ಟ್ ಕೆಲಸದ ಮೇಲೆ ಅಮೇರಿಕಾಗೆ ಕಳುಹಿಸಿಲು ಎಚ್-1ಬಿ ವೀಸಾ ಅನುಕೂಲವಾಗಲಿದೆ. ಒಂದುವೇಳೆ ಅಮೇರಿಕಾ ವೀಸಾಗೆ ನಿರ್ಬಂಧ ಹೇರಿದರೆ 15 ಸಾವಿರ ಕೋಟಿ ಐಟಿ ಸೇವಾ ಕೈಗಾರಿಗೆಗಳು ನಷ್ಟ ಅನುಭವಿಸುತ್ತವೆ. ಅಮೇರಿಕಾ ಆರ್ಥಿಕತೆಯನ್ನು ಬಲಪಡಿಸುವಲ್ಲಿ ಭಾರತೀಯ ಪ್ರತಿಭಾನ್ವಿತ ಎಂಜಿನೀಯರ್ ಗಳ ಪಾತ್ರ ಮಹತ್ವದ್ದು ಎಂದು ಮೋದಿ ಉಲ್ಲೇಖಿಸಿದ್ದಾರೆ.