ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ವಿಶ್ವದ ಟಾಪ್ ತೈಲ ಕಂಪನಿಯ ಮುಖ್ಯಸ್ಥರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ. ನಿರಂತರವಾಗಿ ಏರಿಕೆಯಾಗುತ್ತಿರುವ ತೈಲ ಬೆಲೆ ನಿಟ್ಟಿನಲ್ಲಿ ಈ ಸಭೆ ನಡೆಯಲಿದೆ. 

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ವಿಶ್ವದ, ಭಾರತೀಯ ತೈಲ ಕಂಪನಿ ಮತ್ತು ಗ್ಯಾಸ್ ಕಂಪನಿ ಮುಖ್ಯಸ್ಥರನ್ನು ಭೇಟಿ ಮಾಡಲಿದ್ದಾರೆ. 

ನಿರಂತರವಾಗಿ ತೈಲ ಬೆಲೆ ಏರಿಕೆಯಾಗುತ್ತಿದ್ದು ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ. 

ಜಾಗತಿಕ ಶಕ್ತಿ ಸಂಪನ್ಮೂಲಗಳ ಬಗ್ಗೆಯೂ ಕೂಡ ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಚರ್ಚೆ ಮಾಡಲಿದ್ದಾರೆ. ಇನ್ನು ಜಾಗತಿಕ ಹೂಡಿಕೆದಾರರನ್ನು ಕೂಡ ಸೆಳೆಯುವ ಬಗ್ಗೆ ಈ ವೇಳೆ ಚರ್ಚೆಗಳಾಗಲಿವೆ. ಭಾರತದಲ್ಲಿ ವ್ಯವಹಾರ ಕ್ಷೇತ್ರವನ್ನು ವಿಸ್ತರಣೆ ಮಾಡುವ ಸಲುವಾಗಿ ಈ ಸಭೆಯು ಅನುಕೂಲಕರವಾಗಲಿದೆ. 

ಪ್ರಮುಖವಾಗಿ ತೈಲ ಬೆಲೆ ಏರಿಕೆ ಬಗ್ಗೆ ಚರ್ಚೆ ನಡೆಯಲಿದೆ. ಇದಾದ ಬಳಿಕ ಇಂಧನ ಸಚಿವ ಧರ್ಮೇಂದ್ರ ಪ್ರಧಾನ್ ಹಾಗೂ ಅರುಣ್ ಜೇಟ್ಲಿ ಅವರೊಂದಿಗೆ ಈ ಬಗ್ಗೆ ಪ್ರಧಾನಿ ಸಭೆಯ ಬಗ್ಗೆ ವಿಸ್ತಾರ ಚರ್ಚೆ ಮಾಡಲಿದ್ದಾರೆ. 

ಕೆಲದಿನಗಳ ಹಿಂದಷ್ಟೇ ಕೇಂದ್ರ ಸರ್ಕಾರ ತೈಲ ಬೆಲೆಯಲ್ಲಿ 2.5 ರು ಇಳಿಕೆ ಮಾಡಿತ್ತು. ಇದೀಗ ಮತ್ತೊಮ್ಮೆ ಸಭೆಯು ತೈಲ ಬೆಲೆ ಇಳಿಸಲು ಸಹಕಾರಿಯಾಗಲಿದೆಯಾ ಎನ್ನುವ ಆಶಾಭಾವನೆ ಮೂಡಿದೆ.


Scroll to load tweet…