ನ್ಯೂಯಾರ್ಕ್ (ಸೆ. 04): ಬಯಲು ಶೌಚಮುಕ್ತ ಸಮಾಜದ ಮೂಲಕ ನೈರ್ಮಲ್ಯ ಭಾರತ ನಿರ್ಮಾಣಕ್ಕಾಗಿ ಮಹತ್ವಾಕಾಂಕ್ಷಿ ಸ್ವಚ್ಛ ಭಾರತ ಅಭಿಯಾನ ಕೈಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವದ ಅತಿದೊಡ್ಡ ಚಾರಿಟೇಬಲ್‌ ಟ್ರಸ್ಟ್‌ ‘ಬಿಲ್‌ ಅಂಡ್‌ ಮಿಲಿಂದಾ ಗೇಟ್ಸ್‌ ಫೌಂಡೇಷನ್‌’ ನೀಡುವ ‘ಗ್ಲೋಬಲ್‌ ಗೋಲ್‌ಕೀಪರ್‌ ಅವಾರ್ಡ್‌’ಗೆ ಭಾಜನರಾಗಿದ್ದಾರೆ.

ನಿಮ್ಮ ಬ್ಯಾಂಕ್ ಬದಲಾಗಿದೆ: ಕ್ಲಿಕ್ ಮಾಡಿ ನೋಡಿ ಹಣೆಬರಹ ಏನಾಗಿದೆ?

ಜಾಗತಿಕ ಮಟ್ಟದ ಪರಿಣಾಮಕಾರಿಯಾದ ಗುರಿ ಸಾಧನೆಗಾಗಿ ದೇಶದಲ್ಲಿ ಅಥವಾ ಜಾಗತಿಕ ಮಟ್ಟದಲ್ಲಿ ತಮ್ಮ ಬದ್ಧತೆ ಮತ್ತು ಸಾಧನೆ ಪ್ರದರ್ಶಿಸುವ ವಿಶೇಷ ವ್ಯಕ್ತಿಗೆ ಈ ಪ್ರಶಸ್ತಿ ನೀಡಲಾಗುತ್ತದೆ. ಈ ಪ್ರಕಾರ ಸ್ವಚ್ಛ ಭಾರತ ಅಭಿಯಾನದ ನಾಯಕತ್ವ ಹಾಗೂ ಬದ್ಧತೆಗಾಗಿ ಮೋದಿ ಅವರಿಗೆ ಗ್ಲೋಬಲ್‌ ಗೋಲ್‌ಕೀಪರ್‌ ಈ ಪ್ರತಿಷ್ಠಿತ ಪ್ರಶಸ್ತಿ ಘೋಷಿಸಲಾಗಿದ್ದು, ಸೆಪ್ಟೆಂಬರ್‌ 24ರಂದು ನಡೆಯಲಿರುವ 2019ರ ಸಾಲಿನ ಗ್ಲೋಬಲ್‌ ಗೋಲ್‌ಕೀಪರ್‌ ಅವಾರ್ಡ್‌ ಸಮಾರಂಭದಲ್ಲಿ ಮೋದಿ ಅವರು ಪಾಲ್ಗೊಂಡು ಈ ಪ್ರಶಸ್ತಿ ಸ್ವೀಕರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರತೀ ವರ್ಷವೂ ಮಿಲಿಂದಾ ಗೇಟ್ಸ್‌ ಫೌಂಡೇಶನ್‌ ಪ್ರಗತಿ, ಬದಲಾವಣೆ, ಅಭಿಯಾನ, ಗೋಲ್‌ಕೀಪರ್ಸ್‌ ವಾಯ್‌್ಸ ಹಾಗೂ ಗ್ಲೋಬಲ್‌ ಗೋಲ್‌ ಕೀಪರ್‌ ಎಂಬ ಐದು ವಿಭಾಗಗಳಲ್ಲಿ ಪ್ರಶಸ್ತಿ ನೀಡುತ್ತದೆ.

ಪ್ರಧಾನಿ ಮೋದಿ ಕನಸು; ಮೊಟೆರಾ ಕ್ರೀಡಾಂಗಣಕ್ಕೆ ಹೊಸ ರೂಪ!

ಅಲ್ಲದೆ, ಸೆ.17ರಿಂದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾಗವಹಿಸಲು ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಬ್ಲೂಂಬರ್ಗ್‌ ಗ್ಲೋಬಲ್‌ ಬ್ಯುಸಿನೆಸ್‌ ಫೋರಂ(ಬ್ಲೂಂಬರ್ಗ್‌ ಜಾಗತಿಕ ಉದ್ಯಮ ವೇದಿಕೆ)ನಲ್ಲಿ ಜಾಗತಿಕ ನಾಯಕರು ಹಾಗೂ ಕಾರ್ಪೊರೇಟ್‌ ವಲಯದ ಎಕ್ಸಿಕ್ಯುಟೀವ್‌ಗಳನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ.

ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ 150 ಜಯಂತಿಗೆ ಕಾಲಿಡಲಿರುವ 2019ರ ಅಕ್ಟೋಬರ್‌ 2ರ ಒಳಗಾಗಿ ದೇಶವನ್ನು ಬಯಲು ಶೌಚ ಮುಕ್ತಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಅವರು 2014ರ ಅಕ್ಟೋಬರ್‌ 2ರಂದು ಸ್ವಚ್ಛ ಭಾರತ ಅಭಿಯಾನಕ್ಕೆ ಚಾಲನೆ ನೀಡಿದ್ದರು. ದೇಶಾದ್ಯಂತ 90 ಕೋಟಿ ಶೌಚಾಲಯ ಅಂದರೆ ಶೇ.98ರಷ್ಟುಪ್ರಮಾಣದ ಶೌಚಾಲಯಗಳನ್ನು ನಿರ್ಮಿಸಲಾಗಿದೆ.