ಶಹಜಹಾನ್‌ಪುರ:  ಶುಕ್ರವಾರವಷ್ಟೇ ಲೋಕಸಭೆ ಯಲ್ಲಿ ಅವಿಶ್ವಾಸ ನಿರ್ಣಯ ಮೇಲಿನ ಉತ್ತರದ ವೇಳೆ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳ ಮೇಲೆ ಹರಿಹಾಯ್ದಿದ್ದ ಪ್ರಧಾನಿ ನರೇಂದ್ರ ಮೋದಿ, ಶನಿವಾರ ಮತ್ತೊಮ್ಮೆ ವಿಪಕ್ಷಗಳನ್ನು ಗುರಿಯಾಗಿಸಿ ವಾಗ್ದಾಳಿ ನಡೆಸಿದ್ದಾರೆ. 2019 ರ ಲೋಕಸಭಾ ಚುನಾವಣೆಗೆ ಬಿಜೆಪಿ ವಿರುದ್ಧ ಮೈತ್ರಿಕೂಟ ರಚಿಸುತ್ತಿರುವ ವಿಪಕ್ಷಗಳನ್ನು ಉದ್ದೇಶಿಸಿ  ಮಾತನಾಡಿದ ಮೋದಿ, ವಿಪಕ್ಷಗಳು ಒಂದಾದಷ್ಟು ಕಮಲ ಇನ್ನಷ್ಟು ಅರಳಲಿದೆ ಎಂದು ಹೇಳಿದ್ದಾರೆ.

ಉತ್ತರ ಪ್ರದೇಶದ ಶಹಜಹಾನ್‌ಪುರದಲ್ಲಿ ರೈತ ಕಲ್ಯಾಣ  ರ್ಯಾಲಿಯಲ್ಲಿ ಬೃಹತ್ ಸಂಖ್ಯೆಯ ರೈತರ ನ್ನುದ್ದೇಶಿಸಿ ಮಾತನಾಡಿದರು. 2019 ರ  ಲೋಕಸಭಾ ಚುನಾವಣೆಗೂ ಮುನ್ನ ದೇಶಾದ್ಯಂತ 50ಕ್ಕೂ ಹೆಚ್ಚು ರ್ಯಾ ಲಿಯಲ್ಲಿ ಮೋದಿ ಭಾಗಿಯಾಗುವ ತಂತ್ರವನ್ನು ಬಿಜೆಪಿ ರೂಪಿಸಿದೆ.  ‘ಅವರಲ್ಲಿ (ಪ್ರತಿಪಕ್ಷಗಳು) ಒಂದು ದಳ(ರಾಜಕೀಯ ಪಕ್ಷ)ವಿಲ್ಲ. ಆದರೆ, ದಳಗಳ ಮೇಲೆ ದಳ ಗಳಿರುವುದರಿಂದ ಪರಿಸ್ಥಿತಿ ಈಗ ‘ದಲ-ದಲ (ಜವುಗು ಭೂಮಿ)’ ವಾಗಿದೆ. ಇದು ಹೆಚ್ಚು ಕಮಲಗಳು ಅರಳುವುದಕ್ಕೆ ಸಹಾಯಕವಾಗಲಿದೆ’ ಎಂದು ಲೇವಡಿ ಮಾಡಿದರು. ‘ಪ್ರತಿಪಕ್ಷಗಳು ಬಡವರು, ಯುವಕರು, ರೈತರನ್ನು ಕಡೆಗಣಿಸಿ ಕುರ್ಚಿಯತ್ತ ಓಡುತ್ತಿದ್ದಾರೆ. ಪಕ್ಷಗಳು ಹೆಚ್ಚಿದಂತೆ ಕೊಚ್ಚೆ ಹೆಚ್ಚಾಗುತ್ತದೆ, ಅಲ್ಲೇ ಕಮಲ ಅರಳುತ್ತದೆ.

ಲೋಕಸಭೆಯಲ್ಲಿ ನಿನ್ನೆ (ಶುಕ್ರವಾರ) ಏನು ನಡೆ ಯಿತೋ ಅದರ ಬಗ್ಗೆ ನಿಮಗೆ ತೃಪ್ತಿಯಿದೆಯೇ? ಯಾರದು ತಪ್ಪು ಎಂಬುದು ನಿಮಗೆ ಗೊತ್ತಾಗಿ ದೆಯೇ? ಅವರು ಬಡವರು ಮತ್ತು ದೇಶದ ಬಗ್ಗೆ ನೋಡುತ್ತಿಲ್ಲ, ಪ್ರಧಾನಿ ಕುರ್ಚಿ ಮೇಲೆ ಮಾತ್ರ ಕಣ್ಣಿಟ್ಟಿದ್ದಾರೆ’ ಎಂದು ಆರೋಪಿಸಿದರು. ಇದೇ ವೇಳೆ ರಾಹುಲ್ ಗಾಂಧಿ ತಮ್ಮನ್ನು ಅಪ್ಪಿಕೊಂಡ ಬಗ್ಗೆ ವ್ಯಂಗ್ಯವಾಡಿದ ಮೋದಿ, ‘ಅವಿ ಶ್ವಾಸಕ್ಕೆ ಕಾರಣವೇನು ಎಂದು ನಾವು ಕೇಳಿದ್ದೆವು. ಆದರೆ, ಅದಕ್ಕೆ ಉತ್ತರಿಸಲು ವಿಫಲರಾದಾಗ ಅವರು ಅನಗತ್ಯ ಅಪ್ಪುಗೆಯ ಮೂಲಕ ಚರ್ಚೆ ಕೊನೆಗೊಳಿಸಿದರು’ ಎಂದು ಟೀಕಿಸಿದರು. 

‘ನಾನೇನಾದರೂ ತಪ್ಪು ಮಾಡಿದ್ದೇನಾ? ನಾನು ಬಡವರು ಮತ್ತು ದೇಶದ ಪರವಾಗಿ ಕೆಲಸ ಮಾಡಿ ದ್ದೇನೆ. ಭ್ರಷ್ಟಾಚಾರದ ವಿರುದ್ಧ ಹೋರಾಡಿರು ವುದು ನಾನು ಮಾಡಿರುವ ಅಪರಾಧ’ ಎಂದು ಹೇಳಿದರು.